ಕಳೆದ ಬಾರಿಯ ಐಪಿಎಲ್‌ನ ಬಳಿಕ ರಾಹುಲ್ ತೆವಾಟಿಯಾ ಹೆಸರು ಭಾರತೀಯ ಕ್ರಿಕೆಟ್ ಅಭಿಮಾನಿಗಳಿಗೆ ಚಿರಪರಿಚಿತ. ಶೆಲ್ಡನ್ ಕಾಟ್ರೆಲ್ ಓವರ್‌ನ ಐದು ಎಸೆತಗಳನ್ನು ಸತತವಾಗಿ ಸಿಕ್ಸರ್‌ಗೆ ಅಟ್ಟುವ ಮೂಲಕ ರಾಹುಲ್ ತೆವಾಟಿಯಾ ಎಲ್ಲರನ್ನೂ ನಿಬ್ಬೆರಾಗುವಂತೆ ಮಾಡಿದ್ದರು. ಈಗ ರಾಹುಲ್ ತೆವಾಟಿಯಾ ತಮ್ಮ ಜೀವನದ ಪ್ರಮುಖ ಘಟ್ಟಕ್ಕೆ ಕಾಲಿಡಲು ಸಜ್ಜಾಗಿದ್ದಾರೆ.
ಹೌದು, ರಾಹುಲ್ ತೆವಾಟಿಯ ಮದುವೆಯ ನಿಶ್ಚಿತಾರ್ಥವನ್ನು ಮಾಡಿಕೊಂಡಿದ್ದಾರೆ. ಜನವರಿ 3ರಂದು ನಡೆದ ಸರಳ ಸಮಾರಂಭದಲ್ಲಿ ರಾಹುಲ್ ತೆವಾಟಿಯಾ ರಿಧಿ ಅವರೊಂದಿಗೆ ಉಂಗುರ ಬದಲಿಸಿಕೊಂಡಿದ್ದಾರೆ. ಈ ನಿಶ್ಚಿತಾರ್ಥ ಸಮಾರಂಭದಲ್ಲಿ ಕೊಲ್ಕತ್ತಾ ನೈಟ್ ರೈಡರ್ಸ್ ತಂಡದ ಆಟಗಾರ ನಿತಿಶ್ ರಾಣಾ ಭಾಗಿಯಾಗಿದ್ದರು.
PublicNext
04/02/2021 07:05 pm