ಆಸೀಸ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ತಂಡಕ್ಕೆ ಉತ್ತಮ ಸಾಥ್ ಕೊಟ್ಟು ಅದ್ವಿತೀಯ ಸಾಧನೆ ಮಾಡಿದ ಅಜಿಂಕ್ಯ ರೆಹಾನೆ ಜನವರಿ 21ರಂದು ತಾಯ್ನಾಡಿಗೆ ಹಿಂದಿರುಗಿದ ರಹಾನೆಗೆ ಮುಂಬೈನಲ್ಲಿ ಅಭಿಮಾನಿಗಳು ಭವ್ಯ ಸ್ವಾಗತ ನೀಡಿದರು. ಮುಂಬೈನ ರುಪಾರೆಲ್ ಕಾಲೇಜ್ ಸಮೀಪದ ದಡಾರ್‌ನಲ್ಲಿರುವ ಅಪಾರ್ಟ್‌ಮೆಂಟ್ ಒಂದರಲ್ಲಿ ವಾಸಿಸುವ ರಹಾನೆ, ಮನೆಗೆ ಹಿಂದಿರುಗುತ್ತಿದ್ದಂತೆಯೇ ಅಕ್ಕ ಪಕ್ಕದ ನಿವಾಸಿಗಳೆಲ್ಲಾ ಅದ್ಧೂರಿ ಸ್ವಾಗತ ನೀಡಿದರು.
ಈ ಸಂದರ್ಭದಲ್ಲಿ ಅಭಿಮಾನಿಯೊಬ್ಬರು ತಂದಿದ್ದ ವಿಶೇಷ ಕೇಕ್ ಅನ್ನು ಟೀಮ್ ಇಂಡಿಯಾದ ಉಪನಾಯಕ ಕಟ್ ಮಾಡಲು ನಿರಾಕರಿಸಿದರು. ಆ ಕೇಕ್ ಕಾಂಗರೂ ವಿನ್ಯಾಸವಿದ್ದ ಕಾರಣ ಅದನ್ನು ಕಟ್ ಮಾಡುವುದು ಉತ್ತಮ ಸಂದೇಶ ನೀಡುವುದಿಲ್ಲ ಎಂದು ಹೇಳಿ ಸಭ್ಯ ರೀತಿಯಲ್ಲೇ ತಿರಸ್ಕರಿಸಿದರು. ಈ ವಿಡಿಯೋ ಸೋಷಿಯಲ್ ಮೀಡಿಯಾಗಳಲ್ಲಿ ವೈರಲ್ ಆಗಿದ್ದು, ಅಜಿಂಕ್ಯ ನಡೆಯನ್ನು ನೆಟ್ಟಿಗರು ಮುಕ್ತಕಂಠದಿಂದ ಹೊಗಳಿದ್ದಾರೆ.
ಅಜಿಂಕ್ಯ ಅವರ ನಡೆ ಅಭಿಮಾನಿಗಳ ಮೆಚ್ಚುಗೆಗೆ ಪಾತ್ರವಾಗುತ್ತಿರುವುದು ಇದು ಮೊದಲೇನಲ್ಲ. ಗಬ್ಬಾದಲ್ಲಿ ನಡೆದ ಸರಣಿಯ ಅಂತಿಮ ಟೆಸ್ಟ್‌ನಲ್ಲಿ ವೃತ್ತಿ ಬದುಕಿನ 100ನೇ ಪಂದ್ಯವನ್ನಾಡಿದ್ದ ಆಸೀಸ್‌ನ ಆಫ್ ಸ್ಪಿನ್ನರ್ ನೇಥನ್ ಲಯಾನ್‌ಗೆ ತಂಡದ ಎಲ್ಲಾ ಆಟಗಾರರ ಹಸ್ತಾಕ್ಷರ ಇರುವ ತಮ್ಮ ಟಿ-ಶರ್ಟ್ ನೀಡಿ ಗೌರವಿಸಿದ್ದರು.
PublicNext
22/01/2021 07:31 pm