ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ವಿಮಾನ ನಿಲ್ದಾಣದಿಂದ ನೇರವಾಗಿ ತಂದೆಯ ಸಮಾಧಿ ಸ್ಥಳಕ್ಕೆ ತೆರಳಿದ ಸಿರಾಜ್

ಹೈದರಾಬಾದ್‌: ಆಸ್ಟ್ರೇಲಿಯಾ ಪ್ರವಾಸ ಮುಗಿಸಿ ಹೈದರಾಬಾದ್‌ನ ವಿಮಾನ ನಿಲ್ದಾಣಕ್ಕೆ ಬಂದಿಳಿದ ಟೀಂ ಇಂಡಿಯಾ ಯುವ ಬೌಲರ್‌ ಮೊಹಮ್ಮದ್ ಸಿರಾಜ್ ಅವರು ಅಲ್ಲಿಂದ ನೇರವಾಗಿ ತಂದೆಯ ಸಮಾಧಿ ಸ್ಥಳಕ್ಕೆ ತೆರಳಿ ಪ್ರಾರ್ಥನೆ ಸಲ್ಲಿಸಿದ್ದಾರೆ.

ಈ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ ಸಿರಾಜ್, 'ತಂದೆಯ ನಿಧನದ ಸುದ್ದಿಯು ನನಗೆ ಮಾನಸಿಕವಾಗಿ ಖಿನ್ನತೆಯನ್ನುಂಟು ಮಾಡಿತ್ತು. ಆದರೆ ತಂದೆಯ ಕನಸನ್ನು ಈಡೇರಿಸಿಕೊಂಡು ಮನೆಗೆ ಮರಳುವಂತೆ ನನ್ನ ಕುಟುಂಬ ಹೇಳಿತ್ತು. ಭಾವಿ ಪತ್ನಿಯು ನನ್ನನ್ನು ಪ್ರೇರೇಪಿಸಿದಳು ಮತ್ತು ನನ್ನ ತಂಡವು ಸಹ ಬೆಂಬಲಿಸಿತು. ನಾನು ಗಳಿಸಿದ ಎಲ್ಲಾ ವಿಕೆಟ್‌ಗಳನ್ನು ಅಪ್ಪನಿಗೆ ಅರ್ಪಿಸಿದೆ' ಎಂದು ಹೇಳಿದ್ದಾರೆ.

ಆಸ್ಟ್ರೇಲಿಯಾ ಪ್ರವಾಸದಲ್ಲಿರುವಾಗಲೇ ಮೊಹಮ್ಮದ್ ಸಿರಾಜ್ ಅವರು ತಮ್ಮ ತಂದೆಯನ್ನು ಕಳೆದುಕೊಂಡಿದ್ದರು. ಆದರೂ ದೇಶ ಸೇವೆಗೆ ಮೊದಲ ಆದ್ಯತೆ ನೀಡಿದ್ದ ಅವರು, ತಂದೆಯ ಅಗಲಿಕೆಯ ನೋವಿನಲ್ಲಿಯೂ ತಂಡದ ಜೊತೆಗಿರಲು ನಿರ್ಧರಿಸಿದ್ದರು. ಅದರಂತೆ ಸರಣಿಯಲ್ಲಿ ಭಾರತದ ಪರ 13 ವಿಕೆಟ್ ಕಬಳಿಸಿ ಮಿಂಚಿದರು.

Edited By : Vijay Kumar
PublicNext

PublicNext

21/01/2021 06:28 pm

Cinque Terre

106.36 K

Cinque Terre

34

ಸಂಬಂಧಿತ ಸುದ್ದಿ