ಬ್ರಿಸ್ಬೇನ್: ಆಸ್ಟ್ರೇಲಿಯಾ ವಿರುದ್ಧ ಅಂತಿಮ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ 3 ವಿಕೆಟ್ ಭರ್ಜರಿ ಗೆಲುವು ಸಾಧಿಸಿದೆ.
2-1 ಅಂತರದಲ್ಲಿ ಬಾರ್ಡರ್ ಗವಾಸ್ಕರ್ ಸರಣಿಯನ್ನು ಭಾರತ ಕೈ ವಶ ಮಾಡಿಕೊಂಡಿದೆ. ಗೆಲುವು ಪಡೆಯಲು 328 ರನ್ ಗುರಿ ಪಡೆದು 2 ನೇ ಇನ್ನಿಂಗ್ಸ್ ನಲ್ಲಿ 4 ರನ್ ಗಳಿಸಿ ಇವತ್ತಿನ ದಿನದಾಟ ಆರಂಭಿಸಿದ ಭಾರತ ತಂಡ, 6 ವಿಕೆಟ್ ನಷ್ಟಕ್ಕೆ 329 ರನ್ ಕಲೆ ಹಾಕಿ ವಿಜಯ ಸಾಧಿಸಿದೆ. ಭಾರತ ತಂಡದ ಪರವಾಗಿ 2 ನೇ ಇನ್ನಿಂಗ್ಸ್ ನಲ್ಲಿ ರಿಷಬ್ ಪಂತ್ ಅಜೇಯ 89, ಗಿಲ್ 91, ಪೂಜಾರ, 56, ಸುಂದರ್, 22, ಅಜಿಂಕ್ಯ ರಹಾನೆ 24 ರನ್ ಗಳಿಸುವ ಮೂಲಕ ಗೆಲುವಿಗೆ ಉತ್ತಮ ಸಾಥ್ ನೀಡಿದ್ದಾರೆ.
PublicNext
19/01/2021 01:32 pm