ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಸಿರಾಜ್ ಬೌಲಿಂಗ್ ಕಮಾಲ್: ಟೀಂ ಇಂಡಿಯಾ ಗೆಲುವಿಗೆ 328 ರನ್ ಗುರಿ

ಬ್ರಿಸ್ಬೇನ್: ಆಸ್ಟ್ರೇಲಿಯಾ ವಿರುದ್ಧದ ನಾಲ್ಕನೇ ಹಾಗೂ ನಿರ್ಣಾಯಕ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ಯುವ ವೇಗಿ ಮೊಹಮ್ಮದ್ ಸಿರಾಜ್ ಅದ್ಭುತ ಬೌಲಿಂಗ್ ಪ್ರದರ್ಶನ ನೀಡಿದ್ದಾರೆ.

ಆಸ್ಟ್ರೆಲಿಯಾ ಎರಡನೇ ಇನಿಂಗ್ಸ್‌ನಲ್ಲಿ 294ಕ್ಕೆ ಸರ್ವಪತನ ಕಂಡಿದ್ದು, ಮೊದಲ ಇನ್ನಿಂಗ್ಸ್ ಮುನ್ನಡೆಯೊಂದಿಗೆ 328 ರನ್‌ ಗಳಿಸಿದೆ. ಈ ಮೂಲಕ ಟೀಂ ಇಂಡಿಯಾ ಗೆಲ್ಲಲು 328 ರನ್‌ಗಳ ಗುರಿ ನಿಗದಿಯಾಗಿದೆ. ಈ ಇನ್ನಿಂಗ್ಸ್‌ನಲ್ಲಿ ಮೊಹಮ್ಮದ್ ಸಿರಾಜ್ ಐದು ವಿಕೆಟ್‌ ಪಡೆದರು.ಈ ಮೂಲಕ ಈ ಸರಣಿಯಲ್ಲಿ ಇಂತಹ ಸಾಧನೆ ಮಾಡಿದ ಏಕೈಕ ಬೌಲರ್‌ ಎಂಬ ಗೌರವಕ್ಕೆ ಭಾಜನರಾದರು.

ಸಂಕ್ಷಿಪ್ತ ಸ್ಕೋರ್ ವಿವರ:

ಆಸ್ಟ್ರೇಲಿಯಾ: ಮೊದಲ ಇನಿಂಗ್ಸ್‌ 115.5 ಓವರ್‌ಗಳಲ್ಲಿ 369.

ಭಾರತ: ಪ್ರಥಮ ಇನಿಂಗ್ಸ್‌ 111.4 ಓವರ್‌ಗಳಲ್ಲಿ 336.

ಆಸ್ಟ್ರೇಲಿಯಾ: ಎರಡನೇ ಇನ್ನಿಂಗ್ಸ್‌ 75.5 ಓವರ್‌ಗಳಲ್ಲಿ 294

ಭಾರತ: ಎರಡನೇ ಇನ್ನಿಂಗ್ಸ್‌ 1.5 ಓವರ್‌ಗಲ್ಲಿ 4 ರನ್ (ಯಾವುದೇ ವಿಕೆಟ್‌ ಕಳೆದುಕೊಂಡಿಲ್ಲ).

Edited By : Vijay Kumar
PublicNext

PublicNext

18/01/2021 02:28 pm

Cinque Terre

52.31 K

Cinque Terre

3

ಸಂಬಂಧಿತ ಸುದ್ದಿ