ಮೆಲ್ಬರ್ನ್: ಆಸ್ಟ್ರೇಲಿಯಾ ವಿರುದ್ಧದ ಬಾಕ್ಸಿಂಗ್ ಡೇ ಟೆಸ್ಟ್ ಪಂದ್ಯದ ಮೂಲಕ ಟೀಂ ಇಂಡಿಯಾ ಯುವ ವೇಗದ ಬೌಲರ್ ಮೊಹಮ್ಮದ್ ಸಿರಾಜ್ ಇಂದು ಅಂತಾರಾಷ್ಟ್ರೀಯ ಟೆಸ್ಟ್ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದಾರೆ. ಈ ಪಂದ್ಯದಲ್ಲೇ ಅವರು ತಮ್ಮ ಬೌಲಿಂಗ್ ಕಮಾಲ್ ತೋರಿ ಅಭಿಮಾನಿಗಳ ಮನ ಗೆದ್ದಿದ್ದಾರೆ.
ಆಸೀಸ್ ಇನ್ನಿಂಗ್ಸ್‌ನ 61 ಓವರ್‌ನಲ್ಲಿ ಬೌಲಿಂಗ್ ಮಾಡಿದ ಸಿರಾಜ್ ಮೊದಲ ಮೂರು ಎಸೆತಗಳನ್ನು ಬ್ಯಾಟ್ಸ್‌ಮನ್ ಕ್ಯಾಮರೋನ್ ಗ್ರೀನ್ ಅವರ ಆಫ್‌ಸೈಡ್ ಎಸೆದರು. ಈ ಮೂರು ಎಸೆತಗಳಲ್ಲಿ ಕ್ಯಾಮರೋನ್ ಯಾವುದೇ ರನ್ ಕಲೆ ಹಾಕಲು ಶಕ್ತವಾಗಲಿಲ್ಲ. ಬಳಿಕ ನಾಲ್ಕನೇ ಎಸೆತವನ್ನು ಆಫ್‌ಸೈಡ್ ಎಸೆಯದೇ ವಿಕೆಟ್ ಗುರಿಯಾಗಿಸಿ ಬೌಲಿಂಗ್ ಮಾಡಿದರು. ಇದರಿಂದಾಗಿ ಗೊಂದಲಕ್ಕೆ ಒಳಗಾದ ಬ್ಯಾಟ್ಸ್‌ಮನ್ ಕ್ಯಾಮರೋನ್ ಎಲ್ ಬಿಡಬ್ಲ್ಯೂ ಆಗಿ ವಿಕೆಟ್ ಕಳೆದುಕೊಂಡರು.
ಸಿರಾಜ್ ಅವರು ಕ್ಯಾಮರೋನ್ ವಿಕೆಟ್ ಉರುಳಿಸಿದ ವಿಡಿಯೋ ಸಾಮಾಜಿಕ ವೈರಲ್ ಆಗಿದ್ದು, ಕ್ರಿಕೆಟ್ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
PublicNext
26/12/2020 04:24 pm