ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ನಟ ಮಿಲಿಂದ್ ತಾಯಿಯ ಪುಶ್‌ಅಪ್ ವಿಡಿಯೋವನ್ನ 5 ಬಾರಿ ನೋಡಿ ಸೆಲ್ಯೂಟ್ ಎಂದಿದ್ದಾರೆ.
ನಟ ಮಿಲಿಂದ್ ತಾಯಿ 81 ವರ್ಷದ ಉಷಾ ಸೋಮನ್ ಅವರು ತಮ್ಮ ಫಿಟ್ನೆಸ್ ನಿಂದ ಅನೇಕರಿಂದ ಮೆಚ್ಚುಗೆ ಪಡೆದಿದ್ದಾರೆ. ಸದ್ಯ ಪ್ರಧಾನಿ ನರೇಂದ್ರ ಮೋದಿ ಅವರು ಕೂಡ ಉಷಾ ಅವರ ಪುಶ್‌ಅಪ್ ನೋಡಿ ಆಶ್ಚರ್ಯ ವ್ಯಕ್ತಪಡಿಸಿದ್ದಾರೆ.
ಪ್ರಧಾನಿ ಮೋದಿ ನಟ ಮಿಲಿಂದ್ ಸೋಮನ್ ಜೊತೆ ಗುರುವಾರ ಮಾತನಾಡಿ, ನಿಮ್ಮ ತಾಯಿ ಪುಶ್ ಅಪ್ ಮಾಡೋ ವಿಡಿಯೋವನ್ನು ಯಾರೋ ಕಳುಹಿಸಿದ್ದರು. ನಿಜಕ್ಕೂ ಆಶ್ಚರ್ಯವಾಯ್ತು, 5 ಬಾರಿ ವಿಡಿಯೋ ನೋಡಿದೆ. ನಾನವರಿಗೆ ಸೆಲ್ಯೂಟ್ ಮಾಡುತ್ತೇನೆ ಎಂದಿದ್ದಾರೆ.
PublicNext
24/09/2020 04:08 pm