ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಪಂಚಮಿ ದಿನ ಪಠಾಣ್ ಮನೆಗೆ ಬಂದ ಹಾವು-ಮುಂದೇನಾಯ್ತು ?

ಮಾಜಿ ಕ್ರಿಕೆಟರ್ ಇರ್ಫಾನ್ ಪಠಾಣ್ ಮನೆಗೆ ಹಾವೊಂದು ಬಂದಿದೆ. ಆಗ ಇಡೀ ಮನೆಯಲ್ಲಿ ಆತಂಕದ ವಾತಾವರಣೆ ಸೃಷ್ಟಿಯಾಗಿದೆ. ಆದರೆ, ಈ ಬ್ರದರ್ಸ್ ಆ ಹಾವನ್ನ ಕೊಂದು ಹಾಕೋ ಮಟ್ಟಿಗೆ ಹೋಗಲಿಲ್ಲ. ಬದಲಿಗೆ ಉರಗ ರಕ್ಷಕನನ್ನ ಕರೆಸಿ ಹಾವನ್ನ ಕಾಡಿಗೆ ಬಿಡುವಂತೆ ಹೇಳಿದ್ದಾರೆ.

ಪಠಾಣ್ ಬ್ರದರ್ಸ್ ಮನೆಯಲ್ಲಿ ಕಾಣಿಸಿಕೊಂಡ ಹಾವು ಮನೆಯ ಕಾರಂಜಿ ಬಳಿಯೇ ಇತ್ತು. ಅದನ್ನ ಕಂಡ ಮನೆ ಮಕ್ಕಳು ಗಾಬರಿ ಆಗಿದ್ದರು. ಆದರೆ, ಉರಗ ರಕ್ಷಕ ರಾಜ್ ಭಾವಸರ್ ಬಂದು ಅದನ್ನ ಹಿಡಿದಿದ್ದಾರೆ. ಕೈಯಲ್ಲಿ ಹಿಡಿದು ಮಕ್ಕಳಲ್ಲಿದ್ದ ಭಯವನ್ನ ಕೂಡ ಓಡಿಸಿದ್ದಾರೆ.ಮಕ್ಕಳು ಕೂಡ ಹಾವನ್ನ ಟಚ್‌ ಮಾಡಿ ಖುಷಿ ಪಟ್ಟಿದ್ದಾರೆ.

ಅಂದ್ಹಾಗೆ ಈ ಉರಗವನ್ನ ಈಗ ಕಾಡಿಗೆ ಬಿಡಲಾಗಿದೆ. ಈ ಕ್ಷಣದ ವೀಡಿಯೋವನ್ನ ಇರ್ಫಾನ್ ಪಠಾಣ್ ತಮ್ಮ ಅಧಿಕೃತ ಇನ್‌ಸ್ಟಾಗ್ರಾಮ್ ಪೇಜ್‌ ನಲ್ಲೂ ಹಂಚಿಕೊಂಡಿದ್ದಾರೆ.

Edited By :
PublicNext

PublicNext

01/08/2022 06:06 pm

Cinque Terre

37.67 K

Cinque Terre

2

ಸಂಬಂಧಿತ ಸುದ್ದಿ