ದುಬೈ: ಮಾರ್ಕಸ್ ಸ್ಟಾಯಿನಿಸ್ ಹಾಗೂ ಪೃಥ್ವಿ ಶಾ ಅಬ್ಬರದ ಬ್ಯಾಟಿಂಗ್‌ನಿಂದ ಡೆಲ್ಲಿ ಕ್ಯಾಪಿಟಲ್ಸ್ ತಂಡವು ರಾಯಲ್ ಚಾಲೆಂಜರ್ಸ್ ಬೆಂಗಳೂರಿಗೆ 197 ರನ್‌ಗಳ ಗುರಿಯನ್ನು ನೀಡಿದೆ.
ದುಬೈ ಅಂತರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಐಪಿಎಲ್ನ 19ನೇ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಡೆಲ್ಲಿ ತಂಡವು ನಿಗದಿತ 20 ಓವರ್‌ಗಳಲ್ಲಿ 4 ವಿಕೆಟ್ ನಷ್ಟಕ್ಕೆ 196 ಗಳಿಸಿತು. ಡೆಲ್ಲಿ ಪರ ಮಾರ್ಕಸ್ ಸ್ಟಾಯಿನಿಸ್ ಔಟಾಗದೆ 53 ರನ್ (26 ಎಸೆತ, 6 ಬೌಂಡರಿ, 2 ಸಿಕ್ಸರ್), ಪೃಥ್ವಿ ಶಾ 42 ರನ್ (23 ಎಸೆತ, 5 ಬೌಂಡರಿ, 2 ಸಿಕ್ಸರ್) ಹಾಗೂ ರಿಷಬ್ ಪಂತ್ 37 ರನ್ (25 ಎಸೆತ, 3 ಬೌಂಡರಿ, 2 ಸಿಕ್ಸರ್) ಗಳಿಸಿದರು.
ಟಾಸ್ ಸೋತು ಬ್ಯಾಟಿಂಗ್ಗೆ ಇಳಿದ ಡೆಲ್ಲಿ ತಂಡ ಸ್ಫೋಟಕ ಆರಂಭ ಪಡೆದುಕೊಂಡುತು. ಶಿಖರ್ ಧವನ್ ಜೊತೆ ಕಣಕ್ಕಿಳಿದಿರುವ ಪೃಥ್ವಿ ಶಾ ಮನಮೋಹಕ ಹೊಡೆತದೊಂದಿಗೆ ಗಮನ ಸೆಳೆದರು. ಆರಂಭದಲ್ಲೇ ಆರ್ಸಿಬಿ ಬೌಲರ್ಗಳ ಬೆವರಿಳಿಸಿದ ಶಾ ಪವರ್ ಪ್ಲೇ ಓವರ್ನಲ್ಲಿ ತಂಡದ ಮೊತ್ತವನ್ನು 60ರ ಗಡಿ ದಾಟಿಸಿದರು. ಆದರೆ 7ನೇ ಓವರ್ನ ಮೊಹಮ್ಮದ್ ಸಿರಾಜ್ ಬೌಲಿಂಗ್ನಲ್ಲಿ ಪೃಥ್ವಿ ಕೀಪರ್ ಎಬಿಡಿಗೆ ಕ್ಯಾಚ್ ನೀಡಿ ಔಟ್ ಆದರು. ಧವನ್ 28 ಎಸೆತಗಳಲ್ಲಿ 3 ಬೌಂಡರಿ ಬಾರಿಸಿ 32 ರನ್ ಗಳಿಸಿ ಔಟ್ ಆದರು. ಅಯ್ಯರ್(11 ರನ್) ಈ ಬಾರಿ ಹೆಚ್ಚುಹೊತ್ತು ಕ್ರೀಸ್ನಲ್ಲಿ ನಿಲ್ಲದೆ ಪಡಿಕ್ಕಲ್ ಹಿಡಿದ ಅದ್ಭುತ ಕ್ಯಾಚ್ಗೆ ಬಲಿಯಾದರು. ಅಯ್ಯರ್ ಆಕಾಶಕ್ಕೆ ಚಿಮ್ಮಿದ್ದ ಚೆಂಡನ್ನು ದೇವದತ್ ಪಡಿಕ್ಕಲ್ ಬೌಂಡರಿ ಲೈನ್‌ನಲ್ಲಿ ನಿಂತು ಕ್ಯಾಚ್ ಮಾಡಿದರು. ಬಳಿಕ ರಿಷಬ್ ಪಂತ್ ಹಾಗೂ ಮಾರ್ಕಸ್ ಸ್ಟಾಯಿನಿಸ್ ಭರ್ಜರಿ ಬ್ಯಾಟಿಂಗ್ ನಡೆಸಿ ತಂಡದ ಮೊತ್ತವನ್ನು ಏರಿಸಿದರು.
PublicNext
05/10/2020 09:28 pm