ಸಿಡ್ನಿ: ಟೀಂ ಇಂಡಿಯಾ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ವಿಶ್ವ ಕ್ರಿಕೆಟ್ ಕಂಡ ಶ್ರೇಷ್ಠ ವಿಕೆಟ್ ಕೀಪರ್ಗಳಲ್ಲಿ ಒಬ್ಬರು. ಇದೀಗ ಧೋನಿಯ ದಾಖಲೆಯನ್ನ ಮಹಿಳಾ ಆಟಗಾರ್ತಿಯೊಬ್ಬರು ಮುರಿದು ಹೊಸ ಇತಿಹಾಸ ಬರೆದಿದ್ದಾರೆ.
ಆಸ್ಟ್ರೇಲಿಯಾ ಮಹಿಳಾ ತಂಡದ ವಿಕೆಟ್ ಕೀಪರ್ ಅಲಿಸ್ಸಾ ಹೀಲಿ ಅಂತರಾಷ್ಟ್ರೀಯ ಟಿ20 ಕ್ರಿಕೆಟ್ನಲ್ಲಿ ಎಂಎಸ್‌ಡಿ ದಾಖಲೆಯನ್ನು ಅಳಿಸಿ ಹಾಕಿದ್ದಾರೆ. ಟಿ20 ಇಂಟರ್ನ್ಯಾಷನಲ್ ಕ್ರಿಕೆಟ್ನಲ್ಲಿ 91 ಡಿಸ್ಮಿಸ್ ಮಾಡುವ ಮೂಲಕ ಚುಟುಕು ಕ್ರಿಕೆಟ್ನಲ್ಲಿ ಧೋನಿ ಹೊಸ ದಾಖಲೆ ಬರೆದಿದ್ದರು. ಇದರಲ್ಲಿ 57 ಕ್ಯಾಚ್ ಹಾಗೂ 34 ಸ್ಟಂಪಿಂಗ್ಗಳನ್ನು ಅವರು ಮಾಡಿದ್ದರು. ಇದು ಟಿ20 ಕ್ರಿಕೆಟ್ನ ವಿಕೆಟ್ ಕೀಪರ್ ಒಬ್ಬರ ಶ್ರೇಷ್ಠ ದಾಖಲೆಯಾಗಿತ್ತು.
ಆದರೆ ಇದೀಗ ಧೋನಿಯ ದಾಖಲೆಯನ್ನು ಮೀರಿ ಅಲಿಸ್ಸಾ ಹೀಲಿ ಶ್ರೇಷ್ಠ ಟಿ20 ವಿಕೆಟ್ ಕೀಪರ್ ಎನಿಸಿಕೊಂಡಿದ್ದಾರೆ. ಭಾನುವಾರ ಬ್ರಿಸ್ಬೇನ್ ಮೈದಾನದಲ್ಲಿ ನ್ಯೂಜಿಲೆಂಡ್ ವಿರುದ್ಧದ ಟಿ20 ಪಂದ್ಯದಲ್ಲಿ ಆಮಿ ಸ್ಯಾಟರ್ತ್‌ವೈಟ್‌ನನ್ನು ಸ್ಟಂಪ್ ಮಾಡಿದ್ದರು. ಇದಾದ ಬಳಿಕ ಲಾರೆನ್ ಡೌನ್ ನೀಡಿದ ಕ್ಯಾಚ್ ಹಿಡಿಯುವ ಮೂಲಕ ಹೀಲಿ ತನ್ನ ವಿಕೆಟ್ ಕೀಪಿಂಗ್ ಖಾತೆಗೆ ಎರಡು ಯಶಸ್ಸುಗಳನ್ನು ಪಡೆದಿದ್ದರು. ಈ ಮೂಲಕ ಅಂತರಾಷ್ಟ್ರೀಯ ಕ್ರಿಕೆಟ್ನಲ್ಲಿ ಅಲಿಸ್ಸಾ ಹೀಲಿಯ ಒಟ್ಟು ಯಶಸ್ಸು 92ಕ್ಕೇರಿಸಿದ್ದರು. ಇದರೊಂದಿಗೆ ಧೋನಿ ಹೆಸರಿನಲ್ಲಿದ್ದ 91 ಡಿಸ್ಮಿಸ್ ದಾಖಲೆಯನ್ನು ಅಳಿಸಿ ಹಾಕಿ ಅಲಿಸ್ಸಾ ಹೊಸ ಇತಿಹಾಸ ಬರೆದರು.
ಧೋನಿ 98 ಟಿ20ಐ ಪಂದ್ಯಗಳಿಂದ 91 ಯಶಸ್ಸುಗಳನ್ನು ಪಡೆದಿದ್ರೆ, ಆಸ್ಟ್ರೇಲಿಯಾ ಮಹಿಳಾ ವಿಕೆಟ್ ಕೀಪರ್ ಅಲಿಸ್ಸಾ ಹೀಲಿ 114 ಪಂದ್ಯಗಳ ಮೂಲಕ ಈ ಸಾಧನೆ ಮಾಡಿದ್ದಾರೆ.
PublicNext
28/09/2020 05:16 pm