ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ರಾಮ ಮಂದಿರ ಬೆಂಬಲಿಸಿದ್ದ ಶಮಿ ಪತ್ನಿ ಹಸಿನ್​​ಗೆ ರೇಪ್​ ಬೆದರಿಕೆ- ರಕ್ಷಣೆ ನೀಡುವಂತೆ ಪೊಲೀಸರಿಗೆ ಹೈಕೋರ್ಟ್​ ಸೂಚನೆ

ಕೋಲ್ಕತ್ತಾ: ಟೀಂ ಇಂಡಿಯಾ, ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ವೇಗದ ಬೌಲರ್ ಮೊಹಮ್ಮದ್ ಶಮಿ ಪತ್ನಿ ಹಸಿನ್ ಜಹಾನ್​ಗೆ ಅತ್ಯಾಚಾರ ಬೆದರಿಕೆ ಬಂದಿತ್ತು. ಹೀಗಾಗಿ ಅವರಿಗೆ ರಕ್ಷಣೆ ನೀಡುವಂತೆ ಕೋಲ್ಕತ್ತಾ ಹೈಕೋರ್ಟ್​ ಪೊಲೀಸರಿಗೆ ಸೂಚನೆ ನೀಡಿದೆ.

ಪ್ರಧಾನಿ ನರೇಂದ್ರ ಮೋದಿ ಅವರು ಇತ್ತೀಚೆಗೆ ರಾಮ ಮಂದಿರ ನಿರ್ಮಾಣಕ್ಕೆ ಶಿಲಾನ್ಯಾಸ ಮಾಡಿದ್ದರು. ಇದನ್ನು ಹಸಿನ್​ ಜಹಾನ್​ ಸ್ವಾಗತಿಸಿದ್ದರು. ಈ ಬಗ್ಗೆ ಪೋಸ್ಟ್ ಹಾಕಿದ ಬೆನ್ನಲ್ಲೇ ಅವರಿಗೆ ಕೊಲೆ ಹಾಗೂ ಅತ್ಯಾಚಾರ​ ಬೆದರಿಕೆಗಳು ಬಂದಿದ್ದವು. ಹೀಗಾಗಿ ಹಸಿನ್ ಜಹಾನ್ ಪೊಲೀಸರಿಗೆ ದೂರು ನೀಡಿದ್ದರೂ ಯಾವುದೇ ಪ್ರಯೋಜನ ಆಗಿರಿಲ್ಲ. ಬಳಿಕ ಹೈಕೋರ್ಟ್​ ಮೆಟ್ಟಿಲೇರಿದ್ದರು. ಈ ಕುರಿತು ವಿಚಾರಣೆ ನಡೆಸಿದ ಪಶ್ವಿಮ ಬಂಗಾಳದ ಹೈಕೋರ್ಟ್​ ಅವರಿಗೆ ಭದ್ರತೆ ನೀಡುವಂತೆ ರಾಜ್ಯ ಪೊಲೀಸ್ ಇಲಾಖೆಗೆ ಆದೇಶಿಸಿದೆ.

Edited By : Vijay Kumar
PublicNext

PublicNext

01/10/2020 03:15 pm

Cinque Terre

39.73 K

Cinque Terre

2

ಸಂಬಂಧಿತ ಸುದ್ದಿ