ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಇಂದಿನ IPL ಅಕಾಡದಲ್ಲಿ ಮುಂಬೈ vs ಪಂಜಾಬ್ ಸೆಣಸಾಟ

ಐಪಿಎಲ್ ಅಂಗಳದಲ್ಲಿ ಇಂದು ಮತ್ತೊಂದು ಬೃಹತ್ ಕಾದಾಟ ನಡೆಯಲಿದೆ.

ಹಾಲಿ ಚಾಂಪಿಯನ್ ಮುಂಬೈ ಟೂರ್ನಿಯಲ್ಲಿ ಅಬ್ಬರದ ಆಟವನ್ನು ಪ್ರದರ್ಶಿಸುತ್ತಿರುವ ಕೆಎಲ್ ರಾಹುಲ್ ನೇತೃತ್ವದ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ಸವಾಲನ್ನು ಎದುರಿಸಲಿದೆ.

ಈ ಪಂದ್ಯ ಅಬುದಾಭಿಯ ಶೇಕ್ ಝಾಯೇದ್ ಕ್ರೀಡಾಂಗಣದಲ್ಲಿ ನಡೆಯಲಿದೆ.

ಎರಡೂ ತಂಡಗಳು ತಲಾ ಮೂರು ಪಂದ್ಯಗಳನ್ನು ಆಡಿದ್ದು ಒಂದರಲ್ಲಷ್ಟೇ ಗೆಲುವನ್ನು ಸಾಧಿಸಿದೆ.

ಹೀಗಾಗಿ ಅಂಕಪಟ್ಟಿಯಲ್ಲಿ ಪಂಜಾಬ್ 5ನೇ ಸ್ಥಾನದಲ್ಲಿದ್ದರೆ ಮುಂಬೈ 6ನೇ ಸ್ಥಾನದಲ್ಲಿದೆ.

ಈ ಎರಡೂ ತಂಡಗಳು ಒಂದು ಸೂಪರ್ ಓವರ್ ಸೋಲನ್ನು ಕಂಡಿರುವುದು ಮತ್ತೊಂದು ಗಮನಾರ್ಹ ವಿಚಾರ.

ಮುಂಬೈ ಆರ್ ಸಿಬಿ ವಿರುದ್ಧ ಸೂಪರ್ ಓವರ್ ನಲ್ಲಿ ಸೋಲುಕಂಡಿದ್ದರೆ ಡೆಲ್ಲಿ ವಿರುದ್ಧ ನಡೆ ಪಂದ್ಯದಲ್ಲಿ ಕಿಂಗ್ಸ್ ಇಲವೆನ್ ಪಂಜಾಬ್ ಆಘಾತಕಾರಿಯಾಗಿ ಸೂಪರ್ ಓವರ್ ನಲ್ಲಿ ಮಣಿದಿತ್ತು.

ಕಿಂಗ್ಸ್ ಇಲೆವೆನ್ ಪಂಜಾಬ್ ತಂಡ ಬ್ಯಾಟಿಂಗ್ ನಲ್ಲಿ ಅದ್ಭುತ ಪ್ರದರ್ಶನವನ್ನು ನೀಡುತ್ತಾ ಬಂದಿದೆ.

ತಂಡದಲ್ಲಿ ಆರಂಭಿಕ ಆಟಗಾರರಾದ ನಾಯಕ ಕೆಎಲ್ ರಾಹುಲ್ ಹಾಗೂ ಮಯಾಂಕ್ ಅಗರ್ವಾಲ್ ಅದ್ಭುತ ಫಾರ್ಮ್ ನಲ್ಲಿದ್ದು ಇಬ್ಬರೂ ತಲಾ ಒಂದು ಶತಕ ಹಾಗೂ ಒಂದು ಅರ್ಧ ಶತಕವನ್ನು ಗಳಿಸಿದ್ದಾರೆ.

ಮಾತ್ರವಲ್ಲ ಟೂರ್ನಿಯಲ್ಲಿ ಅತಿ ಹೆಚ್ಚು ರನ್ ಗಳಿಸದ ಆಟಗಾರರ ಪಟ್ಟಿಯಲ್ಲಿ ಮೊದಲ ಎರಡು ಸ್ಥಾನದಲ್ಲಿದ್ದಾರೆ.

ಮುಂಬೈ ಇಂಡಿಯನ್ಸ್ ತಂಡದಲ್ಲಿ ರೋಹಿತ್ ಶರ್ಮಾ ಕೆಕೆಆರ್ ವಿರುದ್ಧದ ಪಂದ್ಯದಲ್ಲಿ 80 ರನ್ ಗಳಿಸಿ ಮಿಂಚಿದ್ದಾರೆ.

ಆರಂಭಿಕ ಆಟಗಾರ ಇಶಾನ್ ಕಿಶನ್ ತಮ್ಮ ಬ್ಯಾಟಿಂಗ್ ಸಾಮರ್ಥ್ಯವನ್ನು ಆರ್ಸಿಬಿ ವಿರುದ್ಧದ ಪಂದ್ಯದಲ್ಲಿ ಸಾಬೀತಿಪಡಿಸಿದ್ದಾರೆ.

ಎರಡು ತಂಡಗಳಲ್ಲೂ ಬೌಲಿಂಗ್ ಪಡೆಯೂ ಬಲಿಷ್ಠವಾಗಿದೆ.

Edited By : Nirmala Aralikatti
PublicNext

PublicNext

01/10/2020 12:15 pm

Cinque Terre

99.67 K

Cinque Terre

117