ಅಬುಧಾಬಿ: ಐಪಿಎಲ್ 13ನೇ ಆವೃತ್ತಿ ಆರಂಭವಾಗಿ ಇಂದಿಗೆ ಮೂರನೇ ದಿನವಷ್ಟೇ. ಆದರೂ ಮೊದಲ ಪಂದ್ಯದಿಂದಲೇ ದಾಖಲೆಗಳು ನಿರ್ಮಾಣವಾಗುತ್ತಿವೆ. ಸದ್ಯ ಕೆ.ಎಲ್. ರಾಹುಲ್ ನಾಯಕ್ವದೊಂದಿಗೆ ಕಿಂಗ್ಸ್ ಇಲೆವನ್ ಪಂಜಾಬ್ ಕೂಡ ಮೈಲಿಗಲ್ಲು ಸೃಷ್ಟಿಸಿದೆ.
ಹೌದು. ಭಾನುವಾರ ನಡೆದ ದೆಹಲಿ ವಿರುದ್ಧದ ಪಂದ್ಯದಲ್ಲಿ ಕೆ.ಎಲ್.ರಾಹುಲ್ ಪಡೆಯು ಸೋಲು ಕಂಡಿದೆ. ಆದರೂ ದೆಹಲಿ ಕ್ಯಾಪಿಟಲ್ಸ್ ಹೆಸರಿನಲ್ಲಿದ್ದ ದಾಖಲೆಯನ್ನು ಹಿಂದಿಕ್ಕಿದ್ದಾರೆ. ಈ ಬಾರಿಯ ಆವೃತ್ತಿಯಲ್ಲಿ 12ನೇ ನಾಯಕನಾಗಿ ಕೆ.ಎಲ್.ರಾಹುಲ್ ಕಿಂಗ್ಸ್ ಇಲೆವನ್ ಪಂಜಾಬ್ ತಂಡವನ್ನು ಐತಿಹಾಸಿಕ ದಾಖಲೆಯೊಂದಿಗೆ ಮುನ್ನಡೆಸುತ್ತಿದ್ದಾರೆ. ಈವರೆಗೂ ಯಾವುದೇ ತಂಡವೂ ಇಷ್ಟು ನಾಯಕರನ್ನು ಬದಲಾಯಿಸಿಲ್ಲ.
ದೆಹಲಿ ವಿರುದ್ಧದ ಪಂದ್ಯದಲ್ಲಿ ಟಾಸ್ ಮಾಡಿದ ಬಳಿಕ ಕೆ.ಎಲ್.ರಾಹುಲ್ ದಾಖಲೆಯನ್ನು ತಮ್ಮ ಖಾತೆಗೆ ಸೇರಿಸಿಕೊಂಡಿದ್ದಾರೆ. ಶ್ರೇಯಸ್ ಅಯ್ಯರ್ ದೆಹಲಿ ಕ್ಯಾಪಿಟಲ್ಸ್‌ನ 11ನೇ ನಾಯಕನಾಗಿ ದಾಖಲೆಯನ್ನು ಹೊಂದಿದ್ದರು.
ಕಿಂಗ್ಸ್ ಇಲೆವನ್ ಪಂಜಾಬ್ ನಾಯಕ, ಸಾಧನೆ
1. ಆಡಮ್ ಗಿಲ್‌ಕ್ರಿಸ್ಟ್ - 34 ಪಂದ್ಯಗಳಲ್ಲಿ 17 ಜಯಗಳು
2. ಜಾರ್ಜ್ ಬೈಲಿ - 16 ಪಂದ್ಯಗಳಲ್ಲಿ 14 ಜಯಗಳು
3. ಯುವರಾಜ್ ಸಿಂಗ್ - 29 ಪಂದ್ಯಗಳಲ್ಲಿ 17 ಜಯಗಳು
4. ಆರ್.ಅಶ್ವಿನ್ - 28 ಪಂದ್ಯಗಳಲ್ಲಿ 12 ಜಯಗಳು
5. ಗ್ಲೆನ್ ಮ್ಯಾಕ್ಸ್ ವೆಲ್ - 14 ಪಂದ್ಯಗಳಲ್ಲಿ 7 ಜಯಗಳು
6. ಕುಮಾರ್ ಸಂಗಕ್ಕಾರ - 13 ಪಂದ್ಯಗಳಲ್ಲಿ 3 ಜಯಗಳು
7. ಡೇವಿಡ್ ಹಸ್ಸಿ - 12 ಪಂದ್ಯಗಳಲ್ಲಿ 6 ಜಯಗಳು
8. ಮುರಳಿ ವಿಜಯ್ - 8 ಪಂದ್ಯಗಳಲ್ಲಿ 3 ಜಯಗಳು
9. ಡೇವಿಡ್ ಮಿಲ್ಲರ್ - 6 ಪಂದ್ಯಗಳಲ್ಲಿ 1 ಜಯ
10. ಮಹೇಲಾ ಜಯವರ್ಧನೆ - 1 ಪಂದ್ಯದಲ್ಲಿ 1 ಸೋಲು
11. ವೀರೇಂದ್ರ ಸೆಹ್ವಾಗ್ - ಅವರ ನೇತೃತ್ವದ ಏಕೈಕ ಪಂದ್ಯವು ಟೈನಲ್ಲಿ ಕೊನೆಗೊಂಡಿತ್ತು
12. ಕೆ.ಎಲ್.ರಾಹುಲ್ - 1 ಟೈ ಪಂದ್ಯ (ದೆಹಲಿ ಕ್ಯಾಪಿಟಲ್ಸ್ ಗೆದ್ದಿದೆ)
PublicNext
21/09/2020 03:02 pm