ದುಬೈ : ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಅವರನ್ನು ಸಂಕಷ್ಟಕ್ಕೆ ಸಿಲುಕಿಸಿದೆ ಡೆಲ್ಲಿ ಕ್ಯಾಪಿಟಲ್ಸ್ ನಾಯಕ ಶ್ರೇಯರ್ ಅಯ್ಯರ್ ನೀಡಿದ ಹೇಳಿಕೆ.
ಅಷ್ಟಕ್ಕೂ ಅದ್ಯಾವ ಹೇಳಿಕೆ ಅಂತಿರಾ ಇಲ್ಲಿದೆ ನೋಡಿ ಪೂರ್ತಿ ಮಾಹಿತಿ
ಕಿಂಗ್ಸ್ ಇಲೆವೆನ್ ಪಂಜಾಬ್ ವಿರುದ್ಧ ಭಾನುವಾರ ನಡೆದ ಪಂದ್ಯದಲ್ಲಿ ಡೆಲ್ಲಿ ರೋಚಕ ಗೆಲುವು ಪಡೆದಿತ್ತು.
ಪಂದ್ಯದ ಟಾಸ್ ಸಂದರ್ಭದಲ್ಲಿ ಮಾತನಾಡಿದ್ದ ಅಯ್ಯರ್, ತನಗೆ ಮಾರ್ಗದರ್ಶನ ನೀಡಲು ಪಾಂಟಿಂಗ್ ಹಾಗೂ ಗಂಗೂಲಿ ಇರುವುದು ನನ್ನ ಅದೃಷ್ಟ.
ತಂಡಕ್ಕೂ ಗಂಗೂಲಿ ಅವರ ಮಾರ್ಗದರ್ಶನ ಹಾಗೂ ಸಹಕಾರ ಲಭಿಸುತ್ತಿದೆ ಎಂದು ಹೇಳಿದ್ದರು.
ಈ ಒಂದು ಹೇಳಿಕೆ ಭಾರೀ ಚರ್ಚೆಗೆ ಕಾರಣವಾಗಿತ್ತು. ಕಾರಣ ಸದ್ಯ ಗಂಗೂಲಿ ಬಿಸಿಸಿಐ ಅಧ್ಯಕ್ಷರಾಗಿರುವುದರಿಂದ.
ಎಸ್… ಸಾಮಾನ್ಯವಾಗಿ ಮಾತನಾಡುವಾಗ ಅಯ್ಯರ್ ಆಡಿದ ಮಾತು ಇಷ್ಟೊಂದು ಚರ್ಚಗೆ ಕಾರಣವಾಗಿದೆ ಎಂದು ತಿಳಿಯುತ್ತಿದ್ದಂತೆ ಟ್ವೀಟ್ ಮಾಡಿ ತಮ್ಮ ಹೇಳಿಕೆಗೆ ಸ್ಪಷ್ಟನೆ ನೀಡಿರುವ ಅಯ್ಯರ್, ಯುವ ನಾಯಕನಾಗಿ ಕಳೆದ ಆವೃತ್ತಿಯಲ್ಲಿ ನನಗೆ ಪಾಂಟಿಂಗ್ ಹಾಗೂ ಗಂಗೂಲಿ ಸಹಕಾರ ನೀಡಿದ್ದರು.
ಆದ್ದರಿಂದ ನಾನು ಅವರಿಗೆ ಧನ್ಯವಾದ ಹೇಳುವ ಕ್ರಮದಲ್ಲಿ ಆ ರೀತಿ ಮಾತನಾಡಿದ್ದೇನೆ ಅಷ್ಟೇ. ನನ್ನ ವೈಯುಕ್ತಿಕ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರವಹಿಸಿದ್ದ ಇಬ್ಬರಿಗೂ ಧನ್ಯವಾದ ಹೇಳುವುದಷ್ಟೇ ನನ್ನ ಉದ್ದೇಶವಾಗಿತ್ತು ಎಂದು ಸ್ಪಷ್ಟಪಡಿಸಿದ್ದಾರೆ.
ಕಳೆದ ಆವೃತ್ತಿಯಲ್ಲಿ ಗಂಗೂಲಿ, ಡೆಲ್ಲಿ ತಂಡದ ಮೆಂಟರ್ ಆಗಿದ್ದರು. ಆ ಹಿನ್ನೆಲೆಯಲ್ಲಿ ಅಯ್ಯರ್ ಕೃತಜ್ಞತೆ ತಿಳಿಸಿದ್ದರೆ ಸಾಕಾಗಿತ್ತು ಎಂದು ಕ್ರಿಕೆಟ್ ಅಭಿಮಾನಿಗಳು ಪ್ರತಿಕ್ರಿಯೆ ನೀಡಿದ್ದಾರೆ.
PublicNext
22/09/2020 01:57 pm