ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಐಪಿಎಲ್ ಹಂಗಾಮಾ ಇಂದು, ಚೆನ್ನೈ Vs ಹೈದ್ರಾಬಾದ್ : ಟಾಸ್ ಗೆದ್ದು ಬ್ಯಾಟಿಂಗ್ ಗೆ ಇಳಿದ ಹೈದರಾಬಾದ್ ಪಡೆ

ಐಪಿಎಲ್ ಮ್ಯಾಚ್ 14ರಲ್ಲಿ ಇಂದು, ಚೆನ್ನೈ ಸೂಪರ್ಕಿಂಗ್ಸ್ ಮತ್ತು ಸನ್ರೈಸರ್ಸ್ ಹೈದ್ರಾಬಾದ್ ತಂಡಗಳ ನಡುವೆ, ಬಿಗ್ ಫೈಟ್ ನಡೆಯಲಿದೆ.

ಸೌತ್ ಇಂಡಿಯನ್ ಡರ್ಬಿಯಲ್ಲಿ, ಗೆಲುವಿಗಾಗಿ ಉಭಯ ತಂಡಗಳು ಹೋರಾಟ ಆರಂಭಿಸಿವೆ.

ಸದ್ಯ ಟಾಸ್ ಗೆದ್ದ ವಾರ್ನರ್ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದ್ದಾರೆ.

ಎರಡೂ ತಂಡಗಳು ಈವರೆಗೂ 12 ಬಾರಿ ಮುಖಾಮುಖಿಯಾಗಿದ್ದು 09 ರಲ್ಲಿ ಧೋನಿ ಪಡೆ ಗೆಲುವಿನ ನಗೆ ಬೀರಿದೆ.

ಕೇವಲ 3ರಲ್ಲಿ ಮಾತ್ರ ಹೈದರಬಾದ್ ಜಯ ಸಾಧಿಸಿದೆ.

ದುಬೈ ಅಂತರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಎಂ ನಲ್ಲಿ ಇಂದಿನ ಪಂದ್ಯ ನಡೆಯುತ್ತಿದ್ದು, ಇಲ್ಲಿ ಈ ಬಾರಿ ನಡೆದ 6 ಮ್ಯಾಚ್ ನಲ್ಲೂ ಮೊದಲು ಬ್ಯಾಟಿಂಗ್ ಮಾಡಿದ ತಂಡವೇ ಗೆದ್ದಿದೆ.

ಚೆನ್ನೈ ಗೆ ಇಂದು ಅಂಬಟಿ ರಾಯುಡು ಮತ್ತು ಡ್ವೇನ್ ಬ್ರಾವೋ ಬಲ ತುಂಬಲಿದ್ದಾರೆ.

ಉಭಯ ತಂಡಗಳು ಕೂಡ 3 ಪಂದ್ಯಗಳಲ್ಲಿ ತಲಾ ಎರಡರಲ್ಲಿ ಸೋಲುಂಡು, ಅಂಕಪಟ್ಟಿಯಲ್ಲಿ ಕ್ರಮವಾಗಿ ಕೊನೆ 2 ಸ್ಥಾನದಲ್ಲಿದೆ.

Edited By : Nirmala Aralikatti
PublicNext

PublicNext

02/10/2020 07:22 pm

Cinque Terre

115.35 K

Cinque Terre

78