ಕೊಲಂಬೋ: ಶ್ರೀಲಂಕಾ ದೇಶದ ಜನರು ತೀವ್ರ ಸಂಕಷ್ಟದಲ್ಲಿಯೇ ಇದ್ದಾರೆ. ಆಹಾರ,ಇಂಧನ,ಔಷಧಿ ಹೀಗೆ ಲ್ಲದರ ಕೊರತೆನ್ನ ಇವರು ಎದುರಿಸುತ್ತಿದ್ದಾರೆ.ಹೀಗೆ ಪೆಟ್ರೋಲ್‌ಗಾಗಿಯೇ ಕಾದುನಿಂತ ಜನಕ್ಕೆ ಶ್ರೀಲಂಕಾದ ಮಾಜಿ ಕ್ರಿಕೆಟರ್ ರೋಷನ್ ಮಹಾನಾಮ ಚಹಾ ಮತ್ತು ಬನ್ ವಿತರಿಸುತ್ತಿದ್ದಾರೆ.
ಪೆಟ್ರೋಲ್‌ಗಾಗಿಯೇ ಸರದಿ ಸಾಲಿನಲ್ಲಿ ಕಾಯುತ್ತಿರೋ ಜನತೆಗೆ ಮಾಜಿ ಕ್ರಿಕೆಟರ್ ರೋಷನ್ ಮಹಾನಾಮ ಚಹಾ ಕೊಡ್ತಿರೋ ಫೋಟೋಗಳನ್ನ ಸ್ವತಃ ರೋಷನ್, ಸೋಷಿಯಲ್ ಮೀಡಿಯಾದಲ್ಲೂ ಹಂಚಿಕೊಂಡಿದ್ದಾರೆ.
ಸಮುದಾಯ ಊಟದ ತಂಡದಿಂದಲೇ ಈ ಒಂದು ಕೆಲಸ ಮಾಡಿದ್ದೇವೆ. ಪೆಟ್ರೋಲ್ ಗಾಗಿಯೇ ಕಾಯುತ್ತಿರೋ ಜನರಿಗೆ ಅನೇಕ ಆರೋಗ್ಯ ಸಮಸ್ಯೆ ಕಾಡೋ ಅಪಾಯ ಇದೆ ಅಂತಲೂ ಬರೆದಕೊಂಡಿದ್ದಾರೆ.
PublicNext
20/06/2022 12:57 pm