ಬಾಲ್ಯದಲ್ಲಿ ಮಕ್ಕಳಿಗೆ 'ಆಟವೇ ಪ್ರಪಂಚ'. ಆ ವಯಸ್ಸೇ ಹಾಗೆ ಅಲ್ಲವೇ? ಊಟ- ಪಾಠಕ್ಕಿಂತ ಆಟವೇ ಬಲು ಮುಖ್ಯ, ಉಳಿದದ್ದೆಲ್ಲವೂ ಗೌಣ. ಮನೆಯಂಗಳ, ಹಾದಿ- ಬೀದಿಯೇ ಸರ್ವ ಆಟಗಳ ಮೈದಾನ.
ಓಡುವುದು, ನೆಗೆಯುವುದು, ಬೀಳುವುದು...ಹೀಗೆ ಆ ಖುಷಿ- ನಗುವಿನಲೆಗಳ ಮಧ್ಯೆ ಕೆಲವೊಮ್ಮೆ ಜಗಳ- ಅಳು, ಚೀರಾಟ ಈ ರಗಳೆಗಳ ಬಳಿಕ ಮತ್ತೆ ಆಟದತ್ತಲೇ ಚಿತ್ತಾಕರ್ಷಣೆ... ಈ ವೀಡಿಯೊದಲ್ಲಿ ಗ್ರಾಮೀಣ ಪ್ರದೇಶದ ಬಾಲಕನೊಬ್ಬ ಪರಿಣತ ಅಥ್ಲೀಟ್ ನಂತೆ ಹೇಗೆ ಜಬರ್ದಸ್ತ್ ನಿರ್ವಹಣೆ ತೋರಿದ್ದಾನೆ ನೋಡಿ!
ಕಟ್ಟಿಗೆಯಿಂದ ಕಟ್ಟಿ, ಜೋಡಿಸಿದ ಕೋಲು ಇಲ್ಲಿ ಪೋಲ್ ವಾಲ್ಟ್ ಪರಿಕರ! ನೆಟ್ಟಿರುವ ಒಣಮರದ ಭಾಗಗಳೇ ಕ್ರೀಡಾ ಸಾಧನ. ಮರಳೇ ಮೆತ್ತನೆಯ ರಕ್ಷಣೆ ನೆಲಹಾಸು! ಆದರೂ ಹಳ್ಳಿ ಹುಡುಗನ ಆತ್ಮವಿಶ್ವಾಸ, ಧೈರ್ಯ- ಹುಮ್ಮಸ್ಸಿನ ನೆಗೆತ ಕ್ರೀಡಾಪ್ರಿಯರ ಮೊಗವರಳಿಸಿ, ಮನ ಗೆಲ್ಲುತ್ತದೆ.
PublicNext
13/08/2021 05:10 pm