ನಾವು ಎಷ್ಟೇ ಗಳಿಸಿರಬಹುದು. ಎಷ್ಟೇ ಹಣ ಇರಬಹುದು. ಎಂತದ್ದೇ ದೊಡ್ಡ ಹುದ್ದೆಯಲ್ಲಿರಬಹುದು. ದೊಡ್ಡ ಸೆಲೆಬ್ರಿಟಿಯೂ ಆಗಿರಬಹುದು. ಏನೇ ಆಗಿದ್ದರೂ ನಾವು ಮನುಷ್ಯತ್ವ ಮರೆಯುವಂತಿಲ್ಲ. ಮರೆತರೆ ಅದು ಅರ್ಥಹೀನ ಬದುಕು.
ಈರೀತಿಯ ಮಾನವೀಯ ಪಾಠ ಕಲಿಸುವ ಅನೇಕ ಘಟನಾವಳಿಗಳು ಆಗಾಗ ನಡೆಯುತ್ತಿರುತ್ತವೆ. ಈ ಘಟನೆ ನೋಡಿ. ಮಹಿಳಾ ಕ್ರಿಕೆಟ್ ತಂಡಗಳ ನಡುವೆ ಮ್ಯಾಚ್ ನಡೆಯುತ್ತಿತ್ತು. ಈ ವೇಳೆ ಬ್ಯಾಟ್ ಬೀಸಿದ ಆಟಗಾರ್ತಿ ಜಬರ್ದಸ್ತ್ ಆಗಿ ಸಿಕ್ಸರ್ ಬಾರಿಸಿದ್ದಾರೆ. ಆ ಹೊಡೆತಕ್ಕೆ ಚೆಂಡು ಮೈದಾನದ ಹೊರ ಅಂಗಳಕ್ಕೆ ಹೋಗಿ ಬಿದ್ದಿದೆ.
ವಿಷಯ ಇರೋದೇ ಇರೋದೆ ಇಲ್ಲಿ. ಮೈದಾನದ ಆಚೆ ಪಂದ್ಯ ನೋಡುತ್ತಾ ಎಂಜಾಯ್ ಮಾಡುತ್ತಿದ್ದ ಬಾಲಕಿ ತಲೆ ಮೇಲೆ ಚೆಂಡು ಬಿದ್ದಿದೆ. ಅದನ್ನು ಗಮನಿಸಿದ ಕ್ರಿಕೆಟ್ ಆಟಗಾರ್ತಿ ಕೂಡಲೇ ಬ್ಯಾಟ್ ಬಿಟ್ಟು ಬಾಲಕಿಯ ಸ್ಥಿತಿ- ಗತಿ ವಿಚಾರಿಸಿದ್ದಾರೆ. ಮತ್ತು ಹೆಚ್ಚಿನ ಉಪಚಾರ ಮಾಡುವಂತೆ ಮೈದಾನದ ಫಿಸಿಯೋಥೆರಪಿಸ್ಟ್ ಗಳಿಗೆ ಸೂಚಿಸಿದ್ದಾರೆ. ಇದು ಮಾನವೀಯತೆಗೆ ಮಾದರಿ ಅಲ್ಲವೇ?
PublicNext
19/01/2021 07:40 pm