ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಓಮಿಕ್ರಾನ್ ಭೀತಿ: IND vs SA; ಟೀಂ ಇಂಡಿಯಾ ದ.ಆಫ್ರಿಕಾ ಪ್ರವಾಸ ಮುಂದೂಡಿಕೆ ಸಾಧ್ಯತೆ

ನವದೆಹಲಿ: ನ್ಯೂಜಿಲೆಂಡ್ ವಿರುದ್ಧದ ಸ್ವದೇಶಿ ಸರಣಿ ಮುಗಿದ ಬಳಿಕ ಭಾರತ ಕ್ರಿಕೆಟ್‌ ತಂಡ ದಕ್ಷಿಣ ಆಫ್ರಿಕಾಕ್ಕೆ ತೆರಳಬೇಕಿತ್ತು. ಆದರೆ ಸದ್ಯ ದಕ್ಷಿಣ ಆಫ್ರಿಕಾದಲ್ಲಿ ಕೊರೊನಾ ಹೊಸ ತಳಿ ಓಮಿಕ್ರಾನ್ ಭೀತಿ ದಿನದಿಂದ ದಿನಕ್ಕೆ ಏರುತ್ತಿರುವ ಕಾರಣ ಭಾರತ- ದಕ್ಷಿಣ ಆಫ್ರಿಕಾ ಸರಣಿಯನ್ನು ಒಂದು ವಾರಗಳ ಕಾಲ ಮುಂದೂಡುವ ಸಾಧ್ಯತೆ ಹೆಚ್ಚಾಗಿದೆ.

ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ) ಓಮಿಕ್ರಾನ್ ನಡುವೆ ಸರಣಿಯಲ್ಲಿ ಭಾರತೀಯ ಆಟಗಾರರ ಸುರಕ್ಷತೆಯ ದೃಷ್ಟಿಯಿಂದ ಸರಣಿಯನ್ನು ಮುಂದೂಡುವಂತೆ ಕ್ರಿಕೆಟ್ ಸೌತ್ ಆಫ್ರಿಕಾ(ಸಿಎಸ್‌ಎ) ಜೊತೆ ಮಾತುಕತೆ ನಡೆಸಿದ್ದು, ಮುಂದೂಡಲು ಒಪ್ಪದಿದ್ದರೆ ಸರಣಿ ರದ್ದು ಮಾಡಲು ಚಿಂತಿಸಿದೆ ಎಂದು ಆಪ್ತ ಮೂಲಗಳಿಂದ ವರದಿಯಾಗಿದೆ.

ದಕ್ಷಿಣ ಆಫಿಕಾ ಪ್ರವಾಸದಲ್ಲಿ ಭಾರತ ತಂಡವು 3 ಟೆಸ್ಟ್, 3 ಏಕದಿನ ಮತ್ತು 4 ಟಿ20 ಸರಣಿಗೆ ಈಗಾಗಲೇ ವೇಳಾಪಟ್ಟಿ ಕೂಡ ನಿಗದಿಯಾಗಿದ್ದು, ಡಿಸೆಂಬರ್ 17ರಿಂದ ಮೊದಲ ಟೆಸ್ಟ್ ಪಂದ್ಯ ಜೋಹನ್‍ಬರ್ಗ್‍ನಲ್ಲಿ ನಿಗದಿಯಾಗಿತ್ತು. ಈ ಪ್ರವಾಸಕ್ಕಾಗಿ ಭಾರತ ತಂಡ ಸುಮಾರು ಒಂದೂವರೆ ತಿಂಗಳ ಕಾಲ ದಕ್ಷಿಣ ಆಫ್ರಿಕಾದಲ್ಲಿ ಇರಲಿದೆ. ಈ ಪಂದ್ಯಗಳು ಜೋಹಾನ್ಸ್‌ಬರ್ಗ್, ಸೆಂಚುರಿಯನ್, ಪರ್ಲ್ ಮತ್ತು ಕೇಪ್ ಟೌನ್‌ನಲ್ಲಿ ನಾಲ್ಕು ಸ್ಥಳಗಳಲ್ಲಿ ನಡೆಯಲಿವೆ. ಆದರೆ ಆಫ್ರಿಕನ್ ದೇಶದಲ್ಲಿ ಹೆಚ್ಚುತ್ತಿರುವ ಕೊರೊನಾ ಪ್ರಕರಣಗಳಿಂದಾಗಿ ಇವು ಬದಲಾಗುವಂತೆ ಕಾಣುತ್ತಿದೆ.

Edited By : Vijay Kumar
PublicNext

PublicNext

02/12/2021 05:24 pm

Cinque Terre

36.73 K

Cinque Terre

1