ಮುಂಬೈ : ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡುಲ್ಕರ್ ಮುದ್ದಿನ ಮಗಳು. ಸಾರಾ ಯಾವ ಬಾಲಿವುಡ್ ಹೀರೊಯಿನ್ ಗೂ ಕಡಿಮೆಯಿಲ್ಲ.
ಲಂಡನ್ ವಿಶ್ವವಿದ್ಯಾಲಯದಲ್ಲಿ ವೈದ್ಯಕೀಯ ಪದವಿ ಪಡೆದಿರೋ 22ರ ಹರೆಯದ ಸಾರಾ ಕೋಲ್ಕತ ನೈಟ್ ರೈಡರ್ಸ್ ಬ್ಯಾಟ್ಸ್ಮನ್ ಶುಬ್ಮನ್ ಗಿಲ್ ನಡುವೆ ಪ್ರಣಯ ಪ್ರಸಂಗ ವೇನಾದರೂ ಇದೆಯಾ? ಚರ್ಚೆ ಶುರುವಾಗಿದೆ.
ತನಗಿಂತ ಒಂದು ವರ್ಷ ಚಿಕ್ಕವನಾಗಿರೋ ಶುಭಮನ್ ಗಿಲ್, ಸದ್ಯ ಕ್ರಿಕೆಟ್ ದುನಿಯಾದಲ್ಲಿ ಮೋಸ್ಟ್ ಹ್ಯಾಂಡ್ಸಮ್ ಕ್ರಿಕೆಟಿಗ.
2018ರ ಅಂಡರ್ ನೈಂಟೀನ್ ವಿಶ್ವಕಪ್ ವಿಜೇತ ತಂಡದಲ್ಲಿದ್ದ ಶುಭಮನ್, ಹೈಯೆಸ್ಟ್ ರನ್ ಗೆಟರ್ ಆಗಿ ಹೊರಹೊಮ್ಮಿದ್ದ.
ಟೀಮ್ ಇಂಡಿಯಾದ ಫ್ಯೂಚರ್ ಸ್ಟಾರ್ ಅಂತಲೇ ಗುರುತಿಸಿಕೊಂಡಿರೋ ಶುಭಮನ್ ಈಗ, ಸಾರಾ ಜೊತೆಗಿನ ಪ್ರೀತಿ ವಿಚಾರದಿಂದಾಗಿ ಸುದ್ದಿಯಾಗಿದ್ದಾನೆ.
ಕೆಲವು ದಿನಗಳ ಹಿಂದೆ ಸಾರಾ ತಮ್ಮದೊಂದು ಚಿತ್ರವನ್ನು ಇನ್ಸ್ಟಾಗ್ರಾಮ್ ನಲ್ಲಿ ಪ್ರಕಟಿಸಿ, ಅದರಡಿ “ಐ ಸ್ಪೈ’ ಎಂದು ಬರೆದಿದ್ದರು.
ಅದಾದ ಮೇಲೆ ಶುಬ್ಮನ್ ಗಿಲ್ ತಮ್ಮ ಚಿತ್ರವನ್ನು ಪ್ರಕಟಿಸಿ, ತಾವೂ “ಐ ಸ್ಪೈ’ ಎಂದು ಬರೆದುಕೊಂಡಿದ್ದರು. ಇದನ್ನು ಸಾಮಾಜಿಕ ತಾಣಿಗರು ಆಗಲೇ ಗುರ್ತಿಸಿದ್ದರು.
ಬುಧವಾರ ಮುಂಬೈ ವಿರುದ್ಧದ ಪಂದ್ಯದಲ್ಲಿ ಸೂರ್ಯ ಕುಮಾರ್ ಯಾದವ್ ಹೊಡೆತವನ್ನು ತಡೆಯಲು ಗಿಲ್ ಚಿಮ್ಮಿದ್ದರು.
ಆ ಚಿತ್ರವನ್ನು ಹೃದಯದ ಇಮೋಜಿಯೊಂದಿಗೆ ಸಾರಾ ಪ್ರಕಟಿಸಿದರು. ಅಲ್ಲಿಗೆ ಇಬ್ಬರ ನಡುವೆ ಏನೋ ಇದೆ ಎಂಬ ಗುಸುಗುಸು ಜೋರಾಗಿದೆ.
PublicNext
25/09/2020 11:04 am