ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಭಾರತದ ಮಾಜಿ ಕ್ರಿಕೆಟಿಗ ವಿನೋದ್ ಕಾಂಬ್ಳಿ ಅರೆಸ್ಟ್

ಮುಂಬೈ: ಮದ್ಯದ ಅಮಲಿನಲ್ಲಿ ಕಾರು ಚಾಲನೆ ಮಾಡಿ ಖಾಸಗಿ ಆಸ್ತಿಗೆ ಹಾನಿ ಉಂಟು ಮಾಡಿದ ಆರೋಪದ ಮೇಲೆ ಟೀಂ ಇಂಡಿಯಾ ಮಾಜಿ ಕ್ರಿಕೆಟರ್‌ ವಿನೋದ್ ಕಾಂಬ್ಳಿ ಅವರನ್ನು ಮಹಾರಾಷ್ಟ್ರ ಪೊಲೀಸರು ಇಂದು ಸಂಜೆ ಬಂಧಿಸಿದ್ದಾರೆ. ನಂತರ ವಿನೋದ್ ಕಾಂಬ್ಳಿ ಅವರನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿದೆ ಎಂದು ವರದಿಯಾಗಿದೆ.

ತಾವು ವಾಸಿಸುವ ಮುಂಬೈನ ಬಾಂದ್ರಾದ ಮನೆಯೊಂದರ ಗೇಟ್‌ಗೆ ಕಾರ್ ಗುದ್ದಿಸಿ, ನಷ್ಟ ಮಾಡಿದ್ದ ಆರೋಪವನ್ನು ಕಾಂಬ್ಳಿ ಅವರ ಮೇಲೆ ಹೊರಿಸಲಾಗಿತ್ತು. ಅಪಾರ್ಟ್‌ಮೆಂಡ್‌ನವರು ನೀಡಿದ ದೂರಿನ ಆಧಾರದಲ್ಲಿ ಕಾಂಬ್ಳಿ ಅವರ ಮೇಲೆ ಐಪಿಸಿ ಕಲಂ 279, 336 ಹಾಗೂ 427 ಅಡಿ ಬಾಂದ್ರಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ವಿನೋದ್ ಕಾಂಬ್ಳಿ ಅವರು ಕ್ರಿಕೆಟ್ ಟೀಂ ಇಂಡಿಯಾದಲ್ಲಿ 1991ರಿಂದ 2000 ರವರೆಗೆ ಆಡಿದ್ದರು.

Edited By : Vijay Kumar
PublicNext

PublicNext

27/02/2022 08:38 pm

Cinque Terre

123.13 K

Cinque Terre

3

ಸಂಬಂಧಿತ ಸುದ್ದಿ