ಸಿಡ್ನಿ: ಕೌಟುಂಬಿಕ ದೌರ್ಜನ್ಯ ಆರೋಪದ ಹಿನ್ನೆಲೆಯಲ್ಲಿ ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ಮಾಜಿ ಆಟಗಾರ ಮೈಕಲ್ ಸ್ಲೇಟರ್ ಅವರನ್ನು ಸಿಡ್ನಿ ಪೊಲೀಸರು ಬುಧವಾರ ಬಂಧಿಸಿದ್ದಾರೆ.
ಸ್ಥಳೀಯ ಮಾಧ್ಯಮಗಳ ವರದಿ ಪ್ರಕಾರ, ಅಕ್ಟೋಬರ್ 12ರಂದು ನಡೆದಿದೆ ಎನ್ನಲಾದ ಕೌಟುಂಬಿಕ ದೌರ್ಜನ್ಯ ಪ್ರಕರಣದಲ್ಲಿ 51 ವರ್ಷದ ಮೈಕಲ್ ಸ್ಲೇಟರ್ ಅವರನ್ನು ಬಂಧಿಸಲಾಗಿದೆ. ಮೈಕಲ್ ಸ್ಲೇಟರ್ ಬಂಧನವನ್ನು ಸೌತ್ ವೇಲ್ಸ್ ಪೊಲೀಸ್ ಠಾಣಾಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.
ಸ್ಲೇಟರ್ ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ಆರಂಭಿಕ ಬ್ಯಾಟರ್ ಆಗಿದ್ದರು. ಅವರು 74 ಅಂತರರಾಷ್ಟ್ರೀಯ ಟೆಸ್ಟ್ ಪಂದ್ಯ ಹಾಗೂ 42 ಏಕದಿನ ಪಂದ್ಯಗಳನ್ನು ಆಗಿದ್ದಾರೆ. ಅವರು ಆಸೀಸ್ ಪರ 5,312 ರನ್ ಗಳಿಸಿದ್ದಾರೆ. 2004ರಲ್ಲಿ ಅಂತರರಾಷ್ಟ್ರೀಯ ಕ್ರಿಕೆಟ್ ಬದುಕಿಗೆ ವಿದಾಯ ಘೋಷಿಸಿದ್ದರು. ಕಳೆದ 15 ವರ್ಷಗಳಿಂದ ಕ್ರಿಕೆಟ್ ಕಾಮೆಂಟೇಟರ್ ಆಗಿ ಕಾರ್ಯನಿರ್ವಹಿಸುತ್ತಾ ಬಂದಿದ್ದಾರೆ.
PublicNext
20/10/2021 01:08 pm