ನವದೆಹಲಿ: ನಟ ಕಿಚ್ಚ ಸುದೀಪ್ ಅಭಿನಯದ 'ವಿಕ್ರಾಂತ್ ರೋಣ' ಚಿತ್ರದ ಟೀಸರ್ ಈಗಾಗಲೇ ಬಿಡುಗಡೆ ಆಗಿದ್ದು ಹವಾ ಸೃಷ್ಟಿಸಿದೆ.
ಈ ಟೀಸರ್‌ನ ವಿಡಿಯೋ ಲಿಂಕ್ ಹಂಚಿಕೊಂಡು ಟ್ವೀಟ್ ಮಾಡಿರುವ ಭಾರತದ ಮಾಜಿ ಕ್ರಿಕೆಟಿಗ ವೀರೇಂದರ್ ಸೆಹ್ವಾಗ್, ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ.
ಬ್ಲಾಕ್‌ಬಸ್ಟರ್ ಬರ್ತಾ ಇದೆ. ಇದು ಗೆಳೆಯ ಸುದೀಪ್ ಅವರ ಅದ್ಭುತ ವರ್ಚಸ್. ಜುಲೈ 28ಕ್ಕೆ ವಿಶ್ವದಾದ್ಯಂತ 3ಡಿ ಥಿಯೇಟರ್‌ಗಳಲ್ಲಿ ಚಿತ್ರ ರಿಲೀಸ್ ಆಗುತ್ತಿದೆ. ನಾನಂತೂ ನೋಡಲು ಕಾತರನಾಗಿದ್ದೇನೆ. ನೀವು ಕೂಡ ಚಿತ್ರ ನೋಡಲು ತಯಾರಾಗಿ ಎಂದು ವೀರೇಂದರ್ ಸೆಹ್ವಾಗ್ ಟ್ವೀಟ್ ಮಾಡಿದ್ದಾರೆ.
PublicNext
02/04/2022 05:26 pm