ಟೋಕಿಯೋ ಒಲಿಂಪಿಕ್ಸ್ ನಲ್ಲಿ ಭಾರತೀಯ ಬ್ಯಾಡ್ಮಿಂಟನ್ ತಾರೆ ಪಿ.ವಿ ಸಿಂಧು ಕಂಚಿನ ಪದಕ ಗೆದ್ದು ಬೀಗಿದ್ದಾರೆ. ಭಾನುವಾರ ನಡೆದ ಮಹಿಳಾ ಸಿಂಗಲ್ಸ್ ಬ್ಯಾಡ್ಮಿಂಟನ್ ನಲ್ಲಿ ಪಿ ವಿ ಸಿಂಧು ಚೀನಾದ ಹೀ ಬಿಂಗ್ಜಿಯಾವೊ ಅವರನ್ನು 21-13, 21-15 ನೇರ ಸೆಟ್ಗಳಿಂದ ಮಣಿಸುವ ಮೂಲಕ ಕಂಚಿನ ಪದಕ ಗೆದ್ದಿದ್ದಾರೆ.
ಕಂಚಿನ ಪದಕಕ್ಕಾಗಿ ಭಾರತದ ಪಿ.ವಿ ಸಿಂಧು ಮತ್ತು ಚೀನದ ಆಟಗಾರ್ತಿ ಬಿಂಗ್ಜಿಯಾವೊ ನಡುವೆ ಭಾರಿ ಪೈಪೋಟಿ ಏರ್ಪಟ್ಟಿತ್ತು. ಭಾರೀ ಕುತೂಹಲಕ್ಕೆ ಕಾರಣವಾಗಿದ್ದ ಈ ಪಂದ್ಯದಲ್ಲಿ ಸಿಂಧು, ಬಿಂಗ್ಜಿಯಾವೊ ವಿರುದ್ದ ಮೊದಲ ಸುತ್ತಿನಲ್ಲಿ ಮೇಲುಗೈ ಸಾಧಿಸಿದ್ದರು. ಮೊದಲ ಸುತ್ತನ್ನು ಗೆದ್ದ ಆತ್ಮ ವಿಶ್ವಾಸದಲ್ಲಿ ಇಡೀ ಪಂದ್ಯದ ಮೇಲೆ ಹಿಡಿತ ಸಾಧಿಸಿದ ಸಿಂಧು 2ನೇ ಸುತ್ತಿನಲ್ಲೂ ಭರ್ಜರಿ ಪ್ರದರ್ಶನ ನೀಡಿದರು.
ಸ್ಯಾಂಡಲ್ವುಡ್ ನಟಿ ಹಾಗೂ ಸಂಸದೆ ಸುಮಲತಾ ಅಂಬರೀಶ್, ಚಿತ್ರಸಾಹಿತಿ ಕವಿರಾಜ್, ಹಾಗೂ ಬಾಲಿವುಡ್ ತಾರೆಗಳಾದ ತಾಪ್ಸಿ ಪನ್ನು, ಪಾರುಲ್ ಯಾದವ್, ಅಭಿಷೇಕ್ ಬಚ್ಚನ್, ರಣದೀಪ್ ಹೂಡ, ದುಲ್ಕರ್ ಸಲ್ಮಾನ್, ರಿತೇಶ್ ದೇಶಮುಖ್ ಹಾಗೂ ಇತರ ತಾರೆಗಳು ಪಿ.ವಿ ಸಿಂಧು ಅವರನ್ನು ಅಭಿನಂದಿಸಿದ್ದಾರೆ.
PublicNext
02/08/2021 01:47 pm