ಅಬುಧಾಬಿ : IPL ಹಂಗಾಮದಲ್ಲಿಂದು ಸೋತ ತಂಡಗಳೆರಡು ಮುಖಾಮುಖಿಯಾಗಲಿವೆ.
ಎಸ್… ಸನ್ರೈಸರ್ ಹೈದರಾಬಾದ್ ಮತ್ತು ಕೋಲ್ಕತಾ ನೈಟ್ರೈಡರ್ ತಂಡಗಳ ಫೈಟ್ ನಡೆಯಲಿದೆ.
ಈ ತಂಡಗಳು ತಮ್ಮ ಮೊದಲ ಪಂದ್ಯದಲ್ಲಿ ಕ್ರಮವಾಗಿ ಆರ್ಸಿಬಿ ಮತ್ತು ಮುಂಬೈ ವಿರುದ್ಧ ಸೋಲುಂಡಿವೆ.
ಇಂದಿನ ಪಂದ್ಯ ಎರಡು ತಂಗಳಿಗೂ ಬಹುಮುಖ್ಯ. ಹೀಗಾಗಿ ಜಯದ ಖಾತೆ ತೆರೆಯುವ ತಂಡ ಯಾವುದು ಎಂಬುದು ಈ ಪಂದ್ಯದ ಕುತೂಹಲ.
ಜತೆಗೆ ಒಂದು ತಂಡಕ್ಕೆ ಸತತ ಎರಡು ಸೋಲಿನ ಕಂಟಕ ತಪ್ಪಿದ್ದಲ್ಲ!
ಮುಖಾಮುಖಿ: 17
ಕೆಕೆಆರ್ ಜಯ: 10
ಹೈದರಾಬಾದ್ ಜಯ: 07
ತಂಡಗಳು
ಕೆಕೆಆರ್: ಶುಭಮನ್ ಗಿಲ್, ಸುನೀಲ್ ನಾರಾಯಣ್, ನಿತೀಶ್ ರಾಣಾ, ದಿನೇಶ್ ಕಾರ್ತಿಕ್ (ನಾಯಕ), ಆಯಂಡ್ರೆ ರಸೆಲ್, ಇಯಾನ್ ಮಾರ್ಗನ್, ನಿಖೀಲ್ ನಾೖಕ್, ಪ್ಯಾಟ್ ಕಮಿನ್ಸ್, ಕುಲದೀಪ್, ಶಿವಂ ಮಾವಿ, ಸಂದೀಪ್ ವಾರಿಯರ್.
ಹೈದರಾಬಾದ್
ಡೇವಿಡ್ ವಾರ್ನರ್ (ನಾಯಕ), ಜಾನಿ ಬೇರ್ಸ್ಟೊ, ಮನೀಷ್ ಪಾಂಡೆ, ಪ್ರಿಯಂ ಗರ್ಗ್, ವಿಜಯ್ ಶಂಕರ್, ಮೊಹಮ್ಮದ್ ನಬಿ, ಅಭಿಷೇಕ್ ಶರ್ಮ, ರಶೀದ್ ಖಾನ್, ಭುವನೇಶ್ವರ್ ಕುಮಾರ್, ಸಂದೀಪ್ ಶರ್ಮ, ಖಲೀಲ್ ಅಹ್ಮದ್.
PublicNext
26/09/2020 07:31 am