ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಟ್ವಿಟ್ಟರ್‌ನಲ್ಲಿ ಕೆಎಲ್ ವಿಶೇಷ ಮೈಲಿಗಲ್ಲು

ನವದೆಹಲಿ: ಕನ್ನಡಿಗ, ಟೀಂ ಇಂಡಿಯಾ ಭಾವಿ ನಾಯಕ ಎಂದೇ ಗುರುತಿಸಿಕೊಂಡಿರುವ ಕೆ.ಎಲ್.ರಾಹುಲ್ ಕ್ರಿಕೆಟ್ ಅಂಗಳದಲ್ಲಿ ಎಷ್ಟು ಖ್ಯಾತರೋ ಅಂಗಳದಾಚೆ ಸಾಮಾಜಿಕ ಜಾಲತಾಣದಲ್ಲೂ ಸಕ್ರಿಯವಾಗಿರುತ್ತಾರೆ. ಹೀಗಾಗಿ ಸದ್ಯ ಕೆಎಲ್ ರಾಹುಲ್ ಟ್ವಿಟ್ಟರ್‌ನಲ್ಲಿ ವಿಶೇಷ ಮೈಲಿಗಲ್ಲೊಂದನ್ನು ದಾಟಿದ್ದಾರೆ.

ಈ ಕುರಿತು ಟ್ವೀಟ ಮಾಡಿರುವ ಕೆ.ಎಲ್.ರಾಹುಲ್, "ನಿಮ್ಮ ಬೆಂಬಲ ಈ ಪಯಣವನ್ನು ವಿಶೇಷವಾಗಿಸಿದೆ. ಎಲ್ಲಾ ಏರಿಳಿತಗಳಲ್ಲೂ ಜೊತೆಯಾಗಿದ್ದೀರಿ. ನಿಮ್ಮೆಲ್ಲರ ಪ್ರೀತಿಗೆ ಕೃತಜ್ಞನಾಗಿದ್ದೇನೆ. 5 ಮಿಲಿಯನ್ ಫಾಲೋವರ್ಸ್" ಎಂದು ರಾಹುಲ್ ಬರೆದುಕೊಂಡಿದ್ದಾರೆ. ಅಂದರೆ 50 ಲಕ್ಷಕ್ಕೂ ಅಧಿಕ ಜನರು ರಾಹುಲ್ ಅವರನ್ನು ಟ್ವಿಟ್ಟರ್‌ನಲ್ಲಿ ಫಾಲೋ ಮಾಡುತ್ತಿದ್ದಾರೆ. ಇತ್ತ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ 8.4 ಮಿಲಿಯನ್ ಅಭಿಮಾನಿಗಳು ಕೆಎಲ್ ರಾಹುಲ್ ಅವರನ್ನು ಫಾಲೋ ಮಾಡುತ್ತಿದ್ದಾರೆ.

Edited By : Vijay Kumar
PublicNext

PublicNext

15/12/2020 04:47 pm

Cinque Terre

35.25 K

Cinque Terre

1