ಟೀಂ ಇಂಡಿಯಾ ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ ನಾಲ್ಕು ತಿಂಗಳ ಬಳಿಕ ಪುತ್ರ ಅಗಸ್ತ್ಯನನ್ನು ಎತ್ತಿ ಮುದ್ದಾಡಿದ್ದಾರೆ.
ತಾವು ಪುತ್ರನಿಗೆ ಹಾಲು ಕುಡಿಸುತ್ತಿರುವ ಫೋಟೋವನ್ನು ಸಾಮಾಜಿಕ ಜಾಲತಾಣದ ಮೂಲಕ ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ. ಜೊತೆಗೆ, 'ದೇಶದ ಕರ್ತವ್ಯದಿಂದ ತಂದೆಯ ಕರ್ತವ್ಯದವರೆಗೆ' ಎಂದು ಬರೆದುಕೊಂಡಿದ್ದಾರೆ.
ಅಗಸ್ತ್ಯ ಕೇವಲ 15 ದಿನವನಿದ್ದಾಗ ಹಾರ್ದಿಕ್ ಪಾಂಡ್ಯ ಐಪಿಎಲ್ ಟೂರ್ನಿಗೆ ತೆರಳಿದ್ದರು. ಆಸ್ಟ್ರೇಲಿಯಾ ವಿರುದ್ಧದ ಟಿ20 ಸರಣಿಯನಲ್ಲಿ ಪಾಂಡ್ಯ ಸ್ಫೋಟಕ ಬ್ಯಾಟಿಂಗ್ ಪ್ರದರ್ಶನ ನೀಡಿ ಸರಣಿ ಶ್ರೇಷ್ಠಕ್ಕೆ ಪಾತ್ರರಾಗಿದ್ದರು. ಟೀಂ ಇಂಡಿಯಾ ಟಿ20 ಸರಣಿಯನ್ನು 2-1 ಅಂತರದಿಂದ ಗೆದ್ದು ಬೀಗಿದೆ. ಆಸೀಸ್ ವಿರುದ್ಧದ ಟೆಸ್ಟ್ ಸರಣಿಗೆ ಭಾರತವು ಭರ್ಜರಿ ಸಿದ್ಧತೆ ನಡೆಸಿದೆ.
PublicNext
12/12/2020 06:51 pm