ಸಿಡ್ನಿ: ಮ್ಯಾಥ್ಯೂ ವೇಡ್ ಹಾಗೂ ಸ್ಟೀವನ್ ಸ್ಮಿತ್ ಅಬ್ಬರದ ಬ್ಯಾಟಿಂಗ್‌ನಿಂದ ಆಸ್ಟ್ರೇಲಿಯಾ ತಂಡವು ಟೀಂ ಇಂಡಿಯಾಗೆ 195 ರನ್‌ಗಳ ಗುರಿಯನ್ನು ನೀಡಿದೆ.
ಸಿಡ್ನಿಯಲ್ಲಿ ನಡೆಯುತ್ತಿರುವ ಟಿ20 ಸರಣಿಯ ಎರಡನೇ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಆಸೀಸ್ ಪಡೆ 5 ವಿಕೆಟ್ ನಷ್ಟಕ್ಕೆ 194 ರನ್ ಗಳಿಸಿದೆ. ತಂಡದ ಪರ ಮ್ಯಾಥ್ಯೂ ವೇಡ್ 58 ರನ್ (32 ಎಸೆತ, 10 ಬೌಂಡರಿ, 1 ಸಿಕ್ಸ್), ಸ್ಟೀವನ್ ಸ್ಮಿತ್ 46 ರನ್ (38 ಎಸೆತ, 3 ಬೌಂಡರಿ, 2 ಸಿಕ್ಸರ್) ಗಳಿಸಿದರೆ, ಮ್ಯಾಕ್ಸ್ ವೆಲ್ 22 ರನ್ ಹಾಗೂ ಮೊಯಿಸಸ್ ಹೆನ್ರಿಕ್ಸ್ 26 ರನ್ ದಾಖಲಿಸಿದರು.
ಟೀಂ ಇಂಡಿಯಾ ಪರ ಟಿ ನಟರಾಜನ್ ಎರಡು ವಿಕೆಟ್ ಕಿತ್ತು ಮಿಂಚಿದರೆ, ಯಜುವೇಂದ್ರ ಚಹಲ್ ಹಾಗೂ ಶಾರ್ದೂಲ್ ಠಾಕೂರ್ ತಲಾ ಒಂದು ವಿಕೆಟ್ ಪಡೆಯುವಲ್ಲಿ ಶಕ್ತರಾದರು.
PublicNext
06/12/2020 03:41 pm