ಸಿಡ್ನಿ: ಭಾರತ- ಆಸ್ಟ್ರೇಲಿಯಾ ನಡುವಿನ ಎರಡನೇ ಏಕದಿನ ಪಂದ್ಯದಲ್ಲಿ ಆ್ಯರನ್ ಫಿಂಚ್ ವಿಕೆಟ್ ಕಬಳಿಸಿದ್ದಾರೆ ಮೊಹಮ್ಮದ್ ಶಮಿ. ಫಿಂಚ್ 69 ಎಸೆತಗಳಲ್ಲಿ 60 ರನ್ ದಾಖಲಿಸಿದ್ದಾರೆ.
ಟಾಸ್ ಗೆದ್ದ ಆಸ್ಟ್ರೇಲಿಯಾ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತ್ತು. ಆರಂಭಿಕ ದಾಂಡಿಗರಾದ ಆ್ಯರನ್ ಫಿಂಚ್ ಮತ್ತು ಡೇವಿಡ್ ವಾರ್ನರ್ ಉತ್ತಮ ಜತೆಯಾಟವಾಡಿದ್ದು ಈ ಜೋಡಿ 142 ರನ್ ಕಲೆ ಹಾಕಿತ್ತು.
23ನೇ ಓವರ್ ನಲ್ಲಿ ಶಮಿ ಎಸೆತಕ್ಕೆ ವಿರಾಟ್ ಕೊಹ್ಲಿಗೆ ಕ್ಯಾಚಿತ್ತು ಫಿಂಚ್ ಔಟಾಗಿದ್ದಾರೆ.
26ನೇ ಓವರ್ ನಲ್ಲಿ ಡೇವಿಡ್ ವಾರ್ನರ್ ಅನ್ನು ರನ್ ಔಟ್ ಮಾಡುವ ಮೂಲಕ ಟೀಂ ಇಂಡಿಯಾ ಆಸ್ಟ್ರೇಲಿಯಾದ ರನ್ ಓಟಕ್ಕೆ ಲಗಾಮು ಹಾಕಿತು.
ಇದೀಗ ಸ್ಟೀವ್ ಸ್ಮಿತ್ ಮತ್ತು ಮಾರ್ನಸ್ ಲಾಬುಶೇನ್ ಕ್ರೀಸ್ನಲ್ಲಿದ್ದಾರೆ. 28ನೇ ಓವರ್ ಅಂತ್ಯದ ವೇಳೆಗೆ ಆಸ್ಟ್ರೇಲಿಯಾದ ಸ್ಕೋರ್ 2 ವಿಕೆಟ್ ನಷ್ಟಕ್ಕೆ 169.
PublicNext
29/11/2020 11:34 am