ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಫಿಂಚ್, ಸ್ಮಿತ್‌ ಅಬ್ಬರದ ಶತಕದಿಂದ ಭಾರತಕ್ಕೆ 375 ರನ್‌ಗಳ ಗುರಿ

ಸಿಡ್ನಿ: ಸಿಡ್ನಿ ಕ್ರಿಕೆಟ್ ಮೈದಾನದಲ್ಲಿ ನಡೆಯುತ್ತಿರುವ ಭಾರತ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಆಸ್ಟ್ರೇಲಿಯಾ 375 ರನ್‌ಗಳ ಬೃಹತ್ ಮೊತ್ತದ ಗುರಿಯನ್ನು ನೀಡಿದೆ.

ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಆಸ್ಟ್ರೇಲಿಯಾ 6 ವಿಕೆಟ್ ನಷ್ಟಕ್ಕೆ 374 ರನ್‌ ಚಚ್ಚಿದೆ. ಆಸೀಸ್ ಪರ ನಾಯಕ ಆ್ಯರೋನ್ ಫಿಂಚ್ 114 ರನ್‌ (124 ಎಸೆತ, 9 ಬೌಂಡರಿ, 2 ಸಿಕ್ಸರ್) ಹಾಗೂ ಸ್ಟೀವ್ ಸ್ಮಿತ್ 105 ರನ್‌ (66 ಎಸೆತ, 11 ಬೌಂಡರಿ, 4 ಸಿಕ್ಸರ್) ಚಚ್ಚಿ ಮಿಂಚಿದರು. ಡೇವಿಡ್ ವಾರ್ನರ್ 69 ರನ್‌, ಮ್ಯಾಕ್ಸ್‌ವೆಲ್ 45 ರನ್‌ಗಳ ಕೊಡುಗೆ ನೀಡಿದರು.

ಟೀಂ ಇಂಡಿಯಾ ಪರ ಮೊಹಮ್ಮದ್ ಶಮಿ 3 ವಿಕೆಟ್‌ ಕಿತ್ತು ಮಿಂಚಿದರೆ, ನವದೀಪ್ ಸೈನಿ, ಜಸ್‌ಪ್ರೀತ್ ಬುರ್ಮಾ ಹಾಗೂ ಯಜುವೇಂದ್ರ ಚಹಲ್ ತಲಾ ಒಂದು ವಿಕೆಟ್‌ ಪಡೆಯುವಲ್ಲಿ ಶಕ್ತರಾದರು.

Edited By : Vijay Kumar
PublicNext

PublicNext

27/11/2020 02:05 pm

Cinque Terre

55.45 K

Cinque Terre

3