ಮುಂಬೈ: ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ಕೆ.ಎಲ್.ರಾಹುಲ್ ಅವರ ನಾಯಕತ್ವಕ್ಕೆ ನಾನು 50:50 ಅಂಕ ನೀಡುತ್ತೇನೆ ಎಂದು ಕಾಮೆಂಟೇಟರ್ ಹಾಗೂ ಮಾಜಿ ಕ್ರಿಕೆಟರ್ ಆಕಾಶ್ ಚೋಪ್ರಾ ಹೇಳಿದ್ದಾರೆ.
ಈ ಬಾರಿಯ ಟೂರ್ನಿಯಲ್ಲಿ ಕೆ.ಎಲ್.ರಾಹುಲ್ ಅದ್ಭುತ ಬ್ಯಾಟಿಂಗ್ ನೀಡಿ ಮಿಂಚಿದ್ದಾರೆ. ಅವರ ನಾಯಕತ್ವದ ತಂಡವು ಲೀಗ್ ಹಂತದಿಂದಲೇ ಹೊರಬಿದ್ದರೂ ಅತಿ ಹೆಚ್ಚು ರನ್ ಗಳಿಸಿದ ಆಟಗಾರನಾಗಿ ಆರೆಂಜ್ ಕ್ಯಾಪ್ ಮುಡಿಗೆರಿಸಿಕೊಂಡಿದ್ದಾರೆ. ಆದರೆ ನಾಯಕನಾಗಿ ಕೆ.ಎಲ್.ರಾಹುಲ್ ಒಂದು ಆಪಾದನೆಯನ್ನು ಸ್ವೀಕರಿಸಲೇಬೇಕು ಎಂದು ಆಕಾಶ್ ಚೋಪ್ರ ಹೇಳಿದ್ದಾರೆ.
ಪಂಜಾಬ್ ತಂಡದ ಅತ್ಯುತ್ತಮ ಆಡುವ ಬಳಗವನ್ನು ಕಂಡುಕೊಳ್ಳಲು ಸಾಧ್ಯವಾಗಿರಲಿಲ್ಲ. ಇದೆಲ್ಲವೂ ತಂಡದ ಮ್ಯಾನೇಜ್‌ಮೆಂಟ್‌ನ ಭಾಗವಾಗಿರುತ್ತದೆ. ಆದರೆ ನಾಯಕನಾಗಿ ತಮ್ಮ ಪಾತ್ರವೂ ಅಲ್ಲಿರುತ್ತದೆ. ಅದೇ ಕಾರಣಕ್ಕೆ ತಂಡ ಮೇಲೇಳಲು ಸಾಕಷ್ಟು ತಡವಾಯಿತು ಎಂದು ಚೋಪ್ರಾ ಅಭಿಪ್ರಾಯಪಟ್ಟಿದ್ದಾರೆ.
ರಾಹುಲ್ ಬೌಲರ್‌ಗಳನ್ನು ಆರಂಭದಲ್ಲಿ ನಿಗದಿತವಾಗಿ ಬಳಸಿಕೊಂಡಿರಲಿಲ್ಲ. ಆದರೆ ಬಳಿಕ ರವಿ ಬಿಶ್ನೋಯ್, ಮುರುಗನ್, ಮೊಹಮ್ಮದ್ ಶಮಿ ಅವರನ್ನು ಅದ್ಭುತವಾಗಿ ಉಪಯೋಗಿಸಿಕೊಂಡರು. ಟೂರ್ನಿ ಮುಂದುವರಿಯುತ್ತಿದ್ದಂತೆಯೇ ಕೆ.ಎಲ್.ರಾಹುಲ್ ನಾಯಕತ್ವ ಪಕ್ವತೆಯನ್ನು ಪಡೆದುಕೊಂಡಿತ್ತು ಎಂದು ತಿಳಿಸಿದ್ದಾರೆ.
PublicNext
19/11/2020 11:28 am