ಮುಂಬೈ: ಐಪಿಎಲ್ ಪಂದ್ಯಗಳಿಗೆ ಬೆಟ್ಟಿಂಗ್ ನಡೆಸುತ್ತಿದ್ದ ಮುಂಬೈ ಕ್ರಿಕೆಟರ್ ರಾಬಿನ್ ಮಾರಿಸ್ ಸೇರಿದಂತೆ ಮೂವರನ್ನು ಮುಂಬೈನ ವೆರ್ಸೊವಾ ಪೊಲೀಸರು ಬಂಧಿಸಿದ್ದಾರೆ.
ಕೆನಡ ಮೂಲದ 44 ವರ್ಷದ ರಾಬಿನ್ ಮಾರಿಸ್ ಮುಂಬೈನ ಪಶ್ಚಿಮ ಅಂಧೇರಿಯಲ್ಲಿರುವ ರಾರಿ ರಸ್ತೆಯ ರಾಬಿನ್ ಮಾರಿಸ್ ಫ್ಲಾಟ್‌ನಲ್ಲಿ ಬೆಟ್ಟಿಂಗ್ ನಡೆಸುತ್ತಿದ್ದರು. ಈ ಬಗ್ಗೆ ಮಾಹಿತಿ ಪಡೆದ ಪೋಲಿಸರು ಆರ್‌ಸಿಬಿ ಹಾಗೂ ಹೈದರಾಬಾದ್ ಎಲಿಮಿನೇಟರ್ ಹಣಾಹಣಿ ಪಂದ್ಯದ ದಿನದಂದು ರಾಬಿನ್ ಫ್ಲಾಟ್ ಮೇಲೆ ದಾಳಿ ನಡೆಸಿದ್ದಾರೆ. ಈ ವೇಳೆ ಹಲವು ಮೊಬೈಲ್, ಎರಡು ಟ್ಯಾಬ್, 9 ಸಾವಿರ ನಗದು ವಶಪಡಿಸಿಕೊಂಡಿದ್ದಾರೆ.
ಬಲಗೈ ಬ್ಯಾಟ್ಸ್‌ಮನ್, ಬೌಲರ್ ಆಗಿದ್ದ ರಾಬಿನ್ ಮಾರಿಸ್ ರಣಜಿ ಟ್ರೋಫಿಯಲ್ಲಿ ಮುಂಬೈ ಹಾಗೂ ಒಡಿಶಾ ತಂಡಗಳನ್ನು ಪ್ರತಿನಿಧಿಸಿದ್ದಾರೆ. 42 ಪ್ರಥಮ ದರ್ಜೆ ಹಾಗೂ 51 ಲಿಸ್ಟ್ ಎ ಪಂದ್ಯಗಳನ್ನಾಡಿದ್ದಾರೆ.
PublicNext
09/11/2020 08:37 pm