ಅಬುಧಾಬಿ: ದೇವದತ್ ಪಡಿಕ್ಕಲ್ ತಾಳ್ಮೆಯ ಅರ್ಧಶತಕ, ಕೊನೆಯಲ್ಲಿ ಎಬಿ ಡಿವಿಲಿಯರ್ಸ್ ಅಬ್ಬರದಿಂದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಡೆಲ್ಲಿ ಕ್ಯಾಪಿಟಲ್ಸ್‌ಗೆ 153 ರನ್‌ಗಳ ಗುರಿ ನೀಡಿದೆ.
ಅಬುಧಾಬಿ ಶೇಕ್ ಝಯೇದ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಐಪಿಎಲ್ನ 55ನೇ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಕೋಹ್ಲಿ ಪಡೆ 7 ವಿಕೆಟ್ ನಷ್ಟಕ್ಕೆ 152 ರನ್ ದಾಖಲಿಸಿದೆ. ಆರ್‌ಸಿಬಿ ಪರ ಕನ್ನಡಿಗ ದೇವದತ್ ಪಡಿಕ್ಕಲ್ 50 ರನ್ (41 ಎಸೆತ, 5 ಬೌಂಡರಿ), ಎಬಿ ಡಿವಿಲಿಯರ್ಸ್ 35 ರನ್ (21 ಎಸೆತ , 1 ಬೌಂಡರಿ, 2 ಸಿಕ್ಸರ್), ನಾಯಕ ವಿರಾಟ್ ಕೊಹ್ಲಿ 29 ರನ್ (24 ಎಸೆತ, 2 ಬೌಂಡರಿ, 1 ಸಿಕ್ಸ್), ಜೋಶ್ ಫಿಲಿಪ್ 12 ರನ್ ಹಾಗೂ ಶಿವಂ ದುಬೆ 17 ರನ್ ದಾಖಲಿಸಿದರು.
ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿದ ಆರ್‌ಸಿಬಿ ಆರಂಭದಲ್ಲೇ ಪ್ರಮುಖ ವಿಕೆಟ್ ಕಳೆದುಕೊಂಡಿತು. ನಿಧಾನಗತಿಯಲ್ಲಿ ರನ್ ಕಲೆಹಾಕಲು ಪ್ರಾರಂಭಿಸಿದ ಓಪನರ್ಗಳು 5ನೇ ಓವರ್ನಲ್ಲಿ ಜೋಶ್ ಫಿಲಿಪ್ ವಿಕೆಟ್ ಕಳೆದುಕೊಂಡಿತು. ಈ ಸಂದರ್ಭ ಒಂದಾದ ದೇವದತ್ ಪಡಿಕ್ಕಲ್ ಹಾಗೂ ನಾಯಕ ವಿರಾಟ್ ಕೊಹ್ಲಿ ಭರ್ಜರಿ ಜೊತೆಯಾಟ ಆಡಿದರು. ಈ ಜೋಡಿ ಎರಡನೇ ವಿಕೆಟ್ ನಷ್ಟಕ್ಕೆ 57 ರನ್‌ಗಳ ಕಾಣಿಕೆ ನೀಡಿತು.
ಸ್ಫೋಟಕ ಬ್ಯಾಟಿಂಗ್‌ಗೆ ಇಳಿದಿ ಕೊಹ್ಲಿ 13ನೇ ಓವರಿನಲ್ಲಿ ವಿಕೆಟ್ ಒಪ್ಪಿಸಿದರು. ಬಳಿಕ ಪಡಿಕ್ಕಲ್ ಹಾಗೂ ಎಬಿ ಡಿವಿಲಿಯರ್ಸ್ 30 ರನ್ ಕೊಡುಗೆ ನೀಡಿದರು. ಅರ್ಧಶತಕ ಸಿಡಿಸಿದ್ದ ಪಡಿಕ್ಕಲ್ ಔಟ್ ಆದರು. ಬಳಿಕ ಬಂದ ಕ್ರಿಸ್ ಮೊರೀಸ್ ಯಾವುದೇ ರನ್ ಗಳಿಸದೆ ವಿಕೆಟ್ ಒಪ್ಪಿಸಿದರು.
ಆಕರ್ಷಕ ಅರ್ಧಶತಕ ಸಿಡಿಸಿ ಪಡಿಕ್ಕಲ್ ಔಟ್ ಆದರು. 41 ಎಸೆತಗಳಲ್ಲಿ 5 ಬೌಂಡರಿ ಬಾರಿಸಿ 50 ರನ್ ಗಳಿಸಿದರು. ಕ್ರಿಸ್ ಮೊರೀಸ್ ಮತ್ತೊಮ್ಮೆ ವೈಫಲ್ಯ ಅನುಭವಿಸಿ ಸೊನ್ನೆ ಸುತ್ತಿದರು. ಸ್ಫೋಟಕ ಬ್ಯಾಟಿಂಗ್‌ಗೆ ಇಳಿದ ಶಿವಂ ದುಬೈ 11 ಎಸೆತದಲ್ಲಿ 17 ರನ್ ಚಚ್ಚಿ ವಿಕೆಟ್ ಒಪ್ಪಿಸಿದರು. ಈ ಬೆನ್ನಲ್ಲೇ ಎಬಿಡಿ 34 ರನ್, ಇಸುರು ಉದಾನ 4 ರನ್‌ಗೆ ವಿಕೆಟ್ ಕಳೆದುಕೊಂಡರು.
PublicNext
02/11/2020 09:09 pm