ಅಬುಧಾಬಿ: ಐಪಿಎಲ್ 13ನೇ ಆವೃತ್ತಿಯ 55ನೇ ಪಂದ್ಯದಲ್ಲಿ ಟಾಸ್ ಗೆದ್ದ ಡೆಲ್ಲಿ ಕ್ಯಾಪಿಟಲ್ಸ್ ನಾಯಕ ಶ್ರೇಯಸ್ ಅಯ್ಯರ್ ಬೌಲಿಂಗ್ ಆಯ್ದುಕೊಂಡಿದ್ದಾರೆ. ಈ ಮೂಲಕ ರಾಯಲ್ ಚಾಲೆಂಜರ್ಸ್ ಬೆಂಗಳೂರು ಬ್ಯಾಟಿಂಗ್ ಮಾಡಲಿದೆ.
ಅಬುಧಾಬಿಯ ಶೇಕ್ ಝಾಯೇದ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪಂದ್ಯವು ಉಭಯ ತಂಡಗಳಿಗೂ ಮಹತ್ವದಾಗಿದೆ. ಗೆಲುವು ಮುಖ್ಯವಾಗಿರುವ ಕಾರಣ ಜಿದ್ದಾಜಿದ್ದಿಯ ಕಾದಾಟವನ್ನು ನಿರೀಕ್ಷಿಸಲಾಗಿದೆ.
ಡೆಲ್ಲಿ ಕ್ಯಾಪಿಟಲ್ಸ್: ಶಿಖರ್ ಧವನ್, ಪೃಥ್ವಿ ಶಾ, ಅಜಿಂಕ್ಯಾ ರಹಾನೆ, ಶ್ರೇಯಸ್ ಅಯ್ಯರ್ (ನಾಯಕ), ರಿಷಭ್ ಪಂತ್, ಮಾರ್ಕಸ್ ಸ್ಟೊಯಿನಿಸ್, ಡೇನಿಯಲ್ ಸ್ಯಾಮ್ಸ್, ಅಕ್ಷರ್ ಪಟೇಲ್, ರವಿಚಂದ್ರನ್ ಅಶ್ವಿನ್, ಕಗಿಸೊ ರಬಡಾ, ಆನ್ರಿಚ್ ನಾರ್ಟ್ಜೆ.
ರಾಯಲ್ ಚಾಲೆಂಜರ್ಸ್ ಬೆಂಗಳೂರು: ದೇವದತ್ ಪಡಿಕ್ಕಲ್, ಜೋಷ್ ಫಿಲಿಪ್, ವಿರಾಟ್ ಕೊಹ್ಲಿ (ನಾಯಕ), ಎಬಿ ಡಿವಿಲಿಯರ್ಸ್, ಶಿವಂ ದುಬೆ, ಕ್ರಿಸ್ ಮೊರೀಸ್, ವಾಷಿಂಗ್ಟನ್ ಸುಂದರ್, ಇಸುರು ಉದಾನ, ಶಹ್ಬಾಜ್ ಅಹ್ಮದ್, ಮೊಹಮ್ಮದ್ ಸಿರಾಜ್, ಯಜುವೇಂದ್ರ ಚಾಹಲ್.
PublicNext
02/11/2020 07:13 pm