ಅಬುಧಾಬಿ: ಐಪಿಎಲ್ 13ನೇ ಆವೃತ್ತಿ 53ನೇ ಪಂದ್ಯದಲ್ಲಿ ಟಾಸ್ ಗೆದ್ದ ಚೆನ್ನೈ ಸೂಪರ್ ಕಿಂಗ್ಸ್ ನಾಯಕ ಎಂ.ಎಸ್.ಧೋನಿ ಕಿಂಗ್ಸ್ ಇಲೆವೆನ್ ಪಂಜಾಬ್ ವಿರುದ್ಧ ಬೌಲಿಂಗ್ ಆಯ್ದುಕೊಂಡಿದ್ದಾರೆ. ಈ ಮೂಲಕ ಕೆ.ಎಲ್.ರಾಹುಲ್ ರಾಹುಲ್ ನೇತೃತ್ವದ ತಂಡವು ಮೊದಲು ಬ್ಯಾಟಿಂಗ್ ಮಾಡಲಿದೆ.
ಅಬುಧಾಬಿಯ ಶೈಕ್ ಝಾಯೆದ್ ಸ್ಟೇಡಿಯಂನಲ್ಲಿ ಇಂದು ನಡೆಯುತ್ತಿರುವ ಪಂದ್ಯದಲ್ಲಿ ಪಂಜಾಬ್‌ಗೆ ಗೆಲುವು ತುಂಬಾ ಪ್ರಮುಖವೆನಿಸಿದೆ. ಇತ್ತ ಪ್ಲೇ ಅವಕಾಶವನ್ನು ಕಳೆದುಕೊಂಡಿರುವ ಎಂಎಸ್ ಧೋನಿ ನಾಯಕತ್ವದ ಚೆನ್ನೈ ತಂಡವು ಮತ್ತೆ ಗೆಲುವಿನ ಮುಖ ನೋಡುತ್ತಿದೆ.
ಐಪಿಎಲ್ ಅಂಕಪಟ್ಟಿಯಲ್ಲಿ ಐದನೇ ಸ್ಥಾನದಲ್ಲಿರುವ ಕಿಂಗ್ಸ್ 11 ಪಂಜಾಬ್, ಆಡಿರುವ 13 ಪಂದ್ಯಗಳಲ್ಲಿ 6ರಲ್ಲಿ ಗೆದ್ದು 12 ಅಂಕ ಕಲೆ ಹಾಕಿದೆ. ಚೆನ್ನೈ ಸೂಪರ್ ಕಿಂಗ್ಸ್ 13ರಲ್ಲಿ 5ರಲ್ಲಿ ಗೆದ್ದು 10 ಪಾಯಿಂಟ್ಸ್ ಗಳಿಸಿದೆ. ಪ್ಲೇ ಆಫ್ ಸಾಧ್ಯತೆ ಉಳಿಸಿಕೊಳ್ಳಬೇಕಾದರೆ ಇಂದು ಪಂಜಾಬ್‌ಗೆ ಗೆಲ್ಲಲೇ ಬೇಕಿದೆ.
PublicNext
01/11/2020 03:09 pm