ದುಬೈ: ನಿತೀಶ್ ರಾಣಾ ಅಬ್ಬರ ಅರ್ಧಶತಕದಿಂದ ಕೋಲ್ಕತ್ತಾ ನೈಟ್ ರೈಡರ್ಸ್ ತಂಡವು ಚೆನ್ನೈ ಸೂಪರ್ ಕಿಂಗ್ಸ್‌ಗೆ 173 ರನ್‌ಗಳ ಗುರಿ ನೀಡಿದೆ.
ದುಬೈ ಅಂತರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣ ನಡೆಯುತ್ತಿರುವ ಐಪಿಎಲ್ 13ನೇ ಆವೃತ್ತಿಯ 49ನೇ ಪಂದ್ಯದಲ್ಲಿ ಟಾಸ್ ಗೆದ್ದ ಚೆನ್ನೈ ಬೌಲಿಂಗ್ ಆಯ್ದುಕೊಂಡಿತು. ಅದರಂತೆ ಮೊದಲು ಬ್ಯಾಟಿಂಗ್ ಮಾಡಿದ ಕೆಕೆಆರ್ 5 ವಿಕೆಟ್ ನಷ್ಟಕ್ಕೆ 172 ರನ್ ಪೇರಿಸಿತು. ಕೋಲ್ಕತ್ತಾ ಪರ ನಿತೀಶ್ ರಾಣಾ 87 ರನ್ (61 ಎಸೆತ, 10 ಬೌಂಡರಿ, 4 ಸಿಕ್ಸರ್), ಶುಭ್‌ಮನ್ ಗಿಲ್ 26 ರನ್ (17 ಎಸೆತ, 4 ಬೌಂಡರಿ) ಚಚ್ಚಿದರು.
ಕೆಕೆಆರ್ ಉತ್ತಮ ಆರಂಭ ಪಡೆದುಕೊಂಡಿತ್ತು. ಓಪನರ್ಗಳಾದ ಶುಭ್‌ಮನ್ ಗಿಲ್ ಹಾಗೂ ನಿತೀಶ್ ರಾಣಾ ಎಚ್ಚರಿಕೆಯಿಂದ ಆಟವಾಡಿದರು. ಪವರ್ ಪ್ಲೇ ಓವರ್ ಅನ್ನು ಅತ್ಯುತ್ತಮವಾಗಿ ಉಪಯೋಗಿಸಿಕೊಂಡ ಈ ಜೋಡಿ ಮೊದಲ 6 ಓವರ್ಗಳಲ್ಲಿ 48 ರನ್ ದಾಖಲಿಸಿತು. ಆದರೆ ಬಿರುಸಿನ ಆಟಕ್ಕೆ ಒತ್ತುಕೊಟ್ಟ ಶುಭ್‌ಮನ್ ಗಿಲ್ 8ನೇ ಓವರಿನಲ್ಲಿ ವಿಕೆಟ್ ಒಪ್ಪಿಸಿದರು.
ಬಳಿಕ ಬಂದ ಸುನೀಲ್ ನರೈನ್ (7 ರನ್), ಚೊಚ್ಚಲ ಐಪಿಎಲ್ ಪಂದ್ಯವಾಡಿದ ರಿಂಕು ಸಿಂಗ್ (11 ರನ್) ಹಾಗೂ ನಾಯಕ ಇಯಾನ್ ಮಾರ್ಗನ್ (15 ರನ್) ಬಹುಬೇಗ ವಿಕೆಟ್ ಒಪ್ಪಿಸಿ ಪೆವಿಲಿಯನ್‌ಗೆ ಮರಳಿದರು. ಈ ಮಧ್ಯೆ ದಿನೇಶ್ ಕಾರ್ತಿಕ್ ವಿಕೆಟ್ ಕಾಯ್ದುಕೊಂಡು ಉತ್ತಮ ಬ್ಯಾಟಿಂಗ್ ಪ್ರದರ್ಶನ ನೀಡಿದರು. ಕಾರ್ತಿಕ್ ಅಜೇಯ 21 ರನ್ (10 ಎಸೆತ, 3 ಬೌಂಡರಿ) ಗಳಿಸಿದರೆ, ರಾಹುಲ್ ತ್ರಿಪಾಠಿ ಅಜೇಯ 3 ರನ್ ಗಳಿಸಿದರು.
PublicNext
29/10/2020 09:10 pm