ಪ್ರಸ್ತುತ ಐಪಿಎಲ್‌ನಲ್ಲಿ ಮೂರು ಬಾರಿ ಚಾಂಪಿಯನ್ ಪಟ್ಟ ಮುಡಿಗೇರಿಸಿಕೊಂಡಿದ್ದ ಮಹೇಂದ್ರ ಸಿಂಗ್ ಧೋನಿ ನಾಯಕತ್ವದ ಚೆನ್ನೈ ಸೂಪರ್ ಕಿಂಗ್ಸ್ ತಂಡ ಆವೃತ್ತಿಯಿಂದ ಹೊರ ಬಿದ್ದಿದೆ. ಆದರೂ ಈ ಯೆಲ್ಲೋ ಜೆರ್ಸಿ ಜೊತೆ ಮಾಹಿ ಡಿಮ್ಯಾಂಡ್ ಕಡಿಮೆ ಆಗಿಲ್ಲ.
ಮೂರು ಮಾದರಿ (ಏಕದಿನ, ಟಿ20, ಟೆಸ್ಟ್) ಟ್ರೋಫಿಗಳನ್ನು ಭಾರತಕ್ಕೆ ತಂದುಕೊಟ್ಟ ನಾಯಕ ಎಂಬ ಗರಿಮೆ ಎಂ.ಎಸ್.ಧೋನಿ ಅವರಿಗೆ ಇದೆ. ಇಂದಿನ ಯುವ ಆಟಗಾರರೆಲ್ಲರೂ ಧೋನಿ ಎಂಬ ಗರಡಿಯಲ್ಲಿ ಪಳಗಿದ ಪೈಲ್ವಾನರೇ. ಸಹ ಆಟಗಾರರ ಜೊತೆ ಅಷ್ಟೇ ಭಾವನಾತ್ಮಕ ಸಂಬಂಧ ಹೊಂದಿರುವ ಧೋನಿ ವರ್ಚಸ್ಸಿಗೆ ಅವರ ವಿದಾಯದ ಸುದ್ದಿ ಬಳಿಕ ತಾನು ಕ್ರೀಡಾ ಜಗತ್ತಿಗೆ ವಿದಾಯ ಹೇಳಿದ ಕ್ರಿಕೆಟಿಗ ರೈನಾ ಸಾಕ್ಷಿ.
ನಿವೃತ್ತಿ ಘೋಷಿಸಿರುವ ಧೋನಿಗೆ ಈ ಐಪಿಎಲ್ ಕೊನೆ ಎಂದೆ ಹೇಳಬಹುದು. ಧೋನಿ ಬಗ್ಗೆ ಭಾರತೀಯ ಕ್ರಿಕೆಟ್ ಸಂಸ್ಥೆ ಕೂಡ ಅಷ್ಟೇ ಗೌರವ ಹೊಂದಿದ್ದು ಬಿಸಿಸಿಐ ಅಧಿಕೃತ ಟ್ವಿಟ್ಟರ್ ಅಕೌಂಟ್‌ಗೆ ಧೋನಿ ಫೋಟೋ ಪೋಸ್ಟ್ ಮಾಡಿ "ಧನ್ಯವಾದ ಧೋನಿ" ಎಂದು ಗೌರವ ಸಲ್ಲಿಸಿದೆ.
ಧೋನಿ ಈವರೆಗೆ ಆಡಿದ 90 ಟೆಸ್ಟ್ ಪಂದ್ಯಗಳಲ್ಲಿ 4,876 ರನ್, 350 ಏಕದಿನ ಪಂದ್ಯಗಳಲ್ಲಿ 10,773 ರನ್ ಹಾಗೂ 98 ಟಿ20 ಪಂದ್ಯಗಳಲ್ಲಿ 1,617 ರನ್ ಗಳಿಸಿದ್ದಾರೆ. ಇನ್ನು 202 ಐಪಿಎಲ್ ಪಂದ್ಯಗಳಲ್ಲಿ 4,631 ಕಲೆ ಹಾಕಿದ್ದಲ್ಲದೆ ವಿಕೆಟ್ ಕೀಪಿಂಗ್ ಒಳಗೆ ಬರೋಬ್ಬರಿ 123 ವಿಕೆಟ್ ಸ್ಟಪ್ಪಿಂಗ್ಸ್ ಮಾಡಿದ ಸಾಧನೆ ಹೊಂದಿದ್ದಾರೆ.
PublicNext
29/10/2020 05:16 pm