ದುಬೈ : ಇಂದಿನ ಐಪಿಎಲ್ ನ 43ನೇ ಪಂದ್ಯ ನಡೆಯುತ್ತಿದ್ದು, ಸನ್ರೈಸರ್ಸ್ ಹೈದರಾಬಾದ್ ವಿರುದ್ಧ ಕಿಂಗ್ಸ್ ಇಲೆವೆನ್ ಪಂಜಾಬ್ 126 ರನ್ ಟಾರ್ಗೆಟ್ ಕೊಟ್ಟಿದೆ.
ಹೈದರಾಬಾದ್ ಬೌಲರ್ ಗಳ ಅತ್ಯುತ್ತಮ ಪ್ರದರ್ಶನದ ನೆರವಿನಿಂದ ರಾಹುಲ್ ಪಡೆ 20 ಓವರ್ ಗಳಲ್ಲಿ 126 ರನ್ ಗಳಿಸಿದೆ.
ಟಾಸ್ ಸೋತು ಬ್ಯಾಟಿಂಗ್ ಗೆ ಇಳಿದ ಪಂಜಾಬ್ ತಂಡ ನಿಧಾನಗತಿಯ ಆರಂಭ ಪಡೆದುಕೊಂಡಿತು.
ಕೆ. ಎಲ್ ರಾಹುಲ್ ಜೊತೆ ಇನ್ನಿಂಗ್ಸ್ ಆರಂಭಿಸಿದ ಮಂದೀಪ್ ಸಿಂಗ್ 14 ಎಸೆತಗಳಲ್ಲಿ 17 ರನ್ ಗಳಿಸಿ ಔಟ್ ಆದರು.
ಬಳಿಕ ರಾಹುಲ್ ಜೊತೆಯಾದ ಕ್ರಿಸ್ ಗೇಲ್ ಜೋಡಿ ಬ್ಯಾಟ್ ಬಿಸಿದರು.
ರಾಹುಲ್ 27 ಎಸೆತಗಳಲ್ಲಿ 27 ರನ್ ಗಳಿಸಿ ಔಟ್ ಆದರೆ, ಗೇಲ್ ಆಟ 20 ರನ್ ಗೆ ಅಂತ್ಯವಾಯಿತು.
ಗ್ಲೆನ್ ಮ್ಯಾಕ್ಸ್ವೆಲ್(12) ಮತ್ತೊಮ್ಮೆ ವೈಫಲ್ಯ ಅನುಭವಿಸಿದರೆ, ದೀಪಕ್ ಹೂಡ ಸೊನ್ನೆ ಸುತ್ತಿದರು.
ಅಂತಿಮ ಹಂತದಲ್ಲಿ ನಿಕೋಲಸ್ ಪೂರನ್(28 ಎಸೆತಗಳಲ್ಲಿ 32 ರನ್) ಬ್ಯಾಟ್ ಬೀಸಿ ತಂಡದ ಮೊತ್ತ 120ರ ಗಡಿ ದಾಟಲು ನೆರವಾದರು.
ಪಂಜಾಬ್ 20 ಓವರ್ ಗಳಲ್ಲಿ 7 ವಿಕೆಟ್ ನಷ್ಟಕ್ಕೆ 126 ರನ್ ಗಳಿಸಿತು. ಹೈದರಾಬಾದ್ ಪರ ರಶೀದ್ ಖಾನ್, ಜೇಸನ್ ಹೋಲ್ಡರ್ ಮತ್ತು ಸಂದೀಪ್ ಶರ್ಮಾ ತಲಾ 2 ವಿಕೆಟ್ ಪಡೆದರು.
PublicNext
24/10/2020 09:32 pm