ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಭೀಕರ ಅಪಘಾತ : ಮನೆ ಸೇರಬೇಕಾದವರು ಮಸಣ ಸೇರಿದ್ರು

ಬೆಳಗಾವಿ : ಟ್ರ್ಯಾಕ್ಟರ್ ಡಿಕ್ಕಿಯಾಗಿ ಬೈಕ್ ನಲ್ಲಿದ್ದ ಐದು ತಿಂಗಳ ಮಗು ಸೇರಿ ಮೂವರು ಮೃತಪಟ್ಟಿರುವ ಭೀಕರ ರಸ್ತೆ ಅಪಘಾತ ಗೋಕಾಕ್ ತಾಲೂಕಿನ ಸಂಗನಕೇರಿ ಬಳಿ ನಡೆದಿದೆ.

ಗ್ರಾಮದ ಬಳಿ ಬೈಕ್, ಟ್ರ್ಯಾಕ್ಟರ್, ಕ್ರೂಸರ್ ನಡುವೆ ಅಪಘಾತ ಸಂಭವಿಸಿದೆ.

ಈ ಪರಿಣಾಮ ಮೂವರ ನೆತ್ತರು ಹರಿದಿದೆ.

ಮೃತರು ರಾಯಬಾಗ ತಾಲೂಕಿನ ಹಿಡಕಲ್ ಗ್ರಾಮದ ನಿವಾಸಿಗಳು. ಬೈಕ್ ನಲ್ಲಿ ಹಿಡಕಲ್ ಗೆ ತೆರಳುತ್ತಿದ್ದ ವೇಳೆ ಘಟನೆ ಸಂಭವಿಸಿದೆ.

ಘಟಪ್ರಭಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

Edited By : Nirmala Aralikatti
PublicNext

PublicNext

17/10/2020 06:30 pm

Cinque Terre

36.35 K

Cinque Terre

0