ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

20 ರನ್‌ ಗಡಿದಾಟದ ಕೆಕೆಆರ್‌ನ 7 ಆಟಗಾರರು- ರೋಹಿತ್‌ ಪಡೆಗೆ 49 ರನ್‌ಗಳಿಂದ ಗೆಲವು

ಅಬುಧಾಬಿ: ಉತ್ತಮ ಬ್ಯಾಟಿಂಗ್‌ ಹಾಗೂ ಬೌಲಿಂಗ್ ಪ್ರದರ್ಶನ ನೀಡಿದ ಮುಂಬೈ ಇಂಡಿಯನ್ಸ್ ತಂಡವು ಕೋಲ್ಕತ್ತಾ ನೈಟ್ ರೈಡರ್ಸ್‌ ವಿರುದ್ಧ 49 ರನ್‌ಗಳಿಂದ ಭರ್ಜರಿ ಗೆಲುವು ದಾಖಲಿಸಿದೆ.

ಅಬುಧಾಬಿಯ ಶೇಖ್ ಝಯಾದ್ ಮೈದಾನದಲ್ಲಿ ಇಂದು ನಡೆದ ಐಪಿಎಲ್​ನ 5ನೇ ಪಂದ್ಯದಲ್ಲಿ ಮುಂಬೈ ಗೆಲುವಿನ ಖಾತೆ ತೆರೆದಿದೆ. ಮುಂಬೈ ಇಂಡಿಯನ್ಸ್‌ ನೀಡಿದ್ದ 196 ರನ್‌ ಗುರಿ ಬೆನ್ನಟ್ಟುವಲ್ಲಿ ವಿಫಲವಾದ ಕೆಕೆಆರ್‌ ನಿಗದಿತ 20 ಓವರ್‌ಗಳಲ್ಲಿ 9 ವಿಕೆಟ್‌ ನಷ್ಟಕ್ಕೆ 146 ಗಳಿಸಲು ಶಕ್ತವಾಯಿತು.

ಕೆಕೆಆರ್‌ ಪರ ಪ್ಯಾಟ್​ ಕಮ್ಮಿನ್ಸ್ 33 ರನ್, ನಾಯಕ ದಿನೇಶ್​ ಕಾರ್ತಿಕ್ 30 ರನ್, ನಿತೇಶ್​ ರಾಣಾ 24 ರನ್ ದಾಖಲಿಸಿದರು. ಈ ಮೂವರು ಆಟಗಾರರನ್ನು ಹೊರತುಪಡಿಸಿ ಯಾರೊಬ್ಬರೂ ಇಪ್ಪತ್ತು ರನ್‌ಗಳ ಗಡಿ ದಾಟಲಿಲ್ಲ.

ಇದಕ್ಕೂ ಮುನ್ನ ಬ್ಯಾಟಿಂಗ್ ಮಾಡಿದ್ದ ಮುಂಬೈ ತಂಡ ರೋಹಿತ್ ಶರ್ಮಾ 80 ರನ್ (54 ಎಸೆತ, 3 ಬೌಂಡರಿ, 6 ಸಿಕ್ಸರ್), ಸೂರ್ಯಕುಮಾರ್ ಯಾದವ್ 47 ರನ್ (28 ಎಸೆತ, 6 ಬೌಂಡರಿ, 1 ಸಿಕ್ಸ್‌) ಹಾಗೂ ಸೌರಭ್​ ತಿವಾರಿ 21 ರನ್‌ಗಳ ಸಹಾಯದಿಂದ ... ವಿಕೆಟ್ ನಷ್ಟಕ್ಕೆ 5 ವಿಕೆಟ್ ನಷ್ಟಕ್ಕೆ 195 ರನ್ ದಾಖಲಿಸಿತ್ತು.

Edited By : Vijay Kumar
PublicNext

PublicNext

23/09/2020 11:52 pm

Cinque Terre

64.79 K

Cinque Terre

4

ಸಂಬಂಧಿತ ಸುದ್ದಿ