ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕೊನೆಯ 2 ಓವರಿನಲ್ಲಿ 5 ಸಿಕ್ಸರ್, 4 ಬೌಂಡರಿ- ಕೆಎಲ್‌ ಶತಕ, ಆರ್‌ಸಿಬಿಗೆ 207 ರನ್‌ಗಳ ಗುರಿ

ದುಬೈ: ನಾಯಕ ಕೆ.ಎಲ್.ರಾಹುಲ್ ಏಕಾಂಗಿ ಹೋರಾಟದೊಂದಿಗೆ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡವು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ 207 ರನ್‌ಗಳ ಗುರಿಯನ್ನು ನೀಡಿದೆ.

ದುಬೈನ ಐಸಿಸಿ ಅಂತರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಐಪಿಎಲ್ 13ನೇ ಆವೃತ್ತಿಯ 6ನೇ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಆರಂಭಿಸಿದ ಕಿಂಗ್ಸ್ ಇಲೆವೆನ್ ಪಂಜಾಬ್ ಕೆಎಲ್ ರಾಹುಲ್ 132 ರನ್ (69 ಎಸೆತ, 14 ಬೌಂಡರಿ, 7 ಸಿಕ್ಸರ್) ಹಾಗೂ ಮಯಾಂಕ್ ಅಗರ್ವಾಲ್ 26 ರನ್ (20 ಎಸೆತ 4 ಬೌಂಡರಿ) ಗಳ ಸಹಾಯದಿಂದ 3 ವಿಕೆಟ್ ನಷ್ಟಕ್ಕೆ 206 ರನ್ ಪೇರಿಸಿದೆ.

ಉತ್ತಮ ಹೊಂದಾಣಿಕೆಯ ಆಟ ಪ್ರದರ್ಶಿಸಿದ ರಾಹುಲ್-ಮಯಾಂಕ್ ಪವರ್​ಪ್ಲೇನಲ್ಲಿ ಅರ್ಧಶತಕದ ಜೊತೆಯಾಟದೊಂದಿಗೆ ತಂಡಕ್ಕೆ ಉತ್ತಮ ಅಡಿಪಾಯ ಹಾಕಿಕೊಟ್ಟರು. ಆದರೆ ಚಹಾಲ್ ಅವರ 7ನೇ ಓವರ್​ನಲ್ಲಿ ಚೆಂಡನ್ನು ಗುರುತಿಸುವಲ್ಲಿ ಎಡವಿದ ಮಯಾಂಕ್ (26) ಕ್ಲೀನ್ ಬೌಲ್ಡ್ ಆಗುವ ಮೂಲಕ ಹೊರ ನಡೆದರು. ಬಳಿಕ ಬಂದ ನಿಕೋಲಸ್ ಪೂನರ್ (17 ರನ್) ಹಾಗೂ ಗ್ಲೇನ್ ಮ್ಯಾಕ್ಸ್‌ವೆಲ್ (5 ರನ್) ಬ್ಯಾಟಿಂಗ್ ವೈಫಲ್ಯ ತೋರಿದರು. ಕೆ.ಎಲ್.ರಾಹುಲ್ ಏಕಾಂಗಿ ಹೋರಾಟಕ್ಕೆ ಕೊನೆಯಲ್ಲಿ ಕರುಣ್ ನಾಯರ್ ಸಾಥ್ ನೀಡಿದರು.

ಇನ್ನಿಂಗ್ಸ್‌ನ 19ನೇ ಓವರಿನಲ್ಲಿ ವಿರಾವೇಷ ತೋರಿದ ಕೆ.ಎಲ್‌.ರಾಹುಲ್ ಮೂರ ಸಿಕ್ಸರ್‌ ಹಾಗೂ ಎರಡು ಬೌಂಡರಿ ಚಚ್ಚಿದರು. 20ನೇ ಓವರಿನಲ್ಲಿಯೂ ಕರುಣ್ ನಾಯರ್ ಕ್ರಮವಾರಿ 2, 4, 1 ಗಳಿಸಿ ರಾಹುಲ್‌ಗೆ ಬ್ಯಾಟಿಂಗ್‌ ಬಿಟ್ಟುಕೊಟ್ಟರು. ಈ ವೇಳೆ ಕೆಎಲ್ ಒಂದು ಬೌಂಡರಿ, ಎರಡು ಸಿಕ್ಸರ್ ಸಿಡಿಸಿ ತಂಡದ ಮೊತ್ತವನ್ನು 206 ರನ್‌ಗೆ ತಂದು ನಿಲ್ಲಿಸಿದರು.

Edited By : Vijay Kumar
PublicNext

PublicNext

24/09/2020 09:28 pm

Cinque Terre

99.64 K

Cinque Terre

7