ಜುಲೈ ತಿಂಗಳಲ್ಲಿ ಬರುವ ಈ ಸೂಪರ್‌ಮೂನ್ ಅನ್ನು ಬಕ್ ಮೂನ್ ಎಂದು ಕರೆಯಲಾಗುತ್ತದೆ. ಏಕೆಂದರೆ ಜೂನ್-ಜುಲೈ ತಿಂಗಳಲ್ಲಿ ಗಂಡು ಜಿಂಕೆಗಳ ಕೊಂಬುಗಳು ವೇಗವಾಗಿ ಬೆಳೆಯುತ್ತವೆ. ಈ ಸಂದರ್ಭದಲ್ಲಿ ಅತ್ಯುತ್ತಮ ಗಾತ್ರವನ್ನು ಅದು ಹೊಂದುತ್ತದೆ. ಅವುಗಳ ಕೊಂಬುಗಳು ಪ್ರತಿ ವಾರ ಸುಮಾರು 2-2 ಇಂಚುಗಳವರೆಗೆ ಬೆಳೆಯುತ್ತವೆ.
ನಾಸಾ ಪ್ರಕಾರ, 2022ರ ಈ ಅತಿದೊಡ್ಡ ಮತ್ತು ಎರಡನೇ ಸೂಪರ್‌ಮೂನ್ ಈ ವಾರ ಮೂರು ದಿನಗಳವರೆಗೆ ಇರುತ್ತದೆ. ಯುಎಸ್ ಬಾಹ್ಯಾಕಾಶ ಸಂಸ್ಥೆ ಹೇಳಿಕೆಯಲ್ಲಿ, 'ಮಂಗಳವಾರ ಬೆಳಿಗ್ಗೆಯಿಂದ ಶುಕ್ರವಾರ ಬೆಳಗಿನವರೆಗೆ ಸುಮಾರು ಮೂರು ದಿನಗಳ ಕಾಲ ಸೂಪರ್ ಮೂನ್ ಗೋಚರಿಸಲಿದೆ. ಬುಧವಾರ ಅಂದರೆ ಇಂದು ಬೆಳಗ್ಗೆ 5:00 ಗಂಟೆಗೆ ಚಂದ್ರನು ಭೂಮಿಗೆ ಹತ್ತಿರದ ಬಿಂದುವನ್ನು ತಲುಪಿದ್ದಾನೆ. ಬುಧವಾರ ರಾತ್ರಿ 9:44 ಪೂರ್ಣ ಚಂದ್ರನು ಆಗ್ನೇಯ ದಿಗಂತದಿಂದ 5 ಡಿಗ್ರಿಗಳಷ್ಟು ದೂರದಲ್ಲಿ ಗೋಚರಿಸುತ್ತದೆ ಎಂದು NASA ಹೇಳಿದೆ.
PublicNext
13/07/2022 09:43 pm