ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

5G ಸೇವೆಯನ್ನು ರಾಜ್ಯದ ಈ ಭಾಗದವರು ಮೊದಲು ಪಡೆಯಲಿದ್ದಾರೆ

ಹೊಸ ವರ್ಷಕ್ಕೆ ದಿನಗಣನೆ ಆರಂಭವಾಗಿದೆ. ಈ ಸಂಭ್ರಮವನ್ನು ದುಪಟ್ಟು ಮಾಡುವ ಸುದ್ದಿವೊಂದು ಇಲ್ಲಿದೆ. ನೂತನ ವರ್ಷಕ್ಕೆ 5G ಇಂಟರ್ನೆಟ್ ಸೇವೆಗಳನ್ನು ಹೊರತರಲಾಗುವುದು ಎಂದು ದೂರಸಂಪರ್ಕ ಇಲಾಖೆ (DoT) ಘೋಷಿಸಿದೆ.

ಪತ್ರಿಕಾ ಹೇಳಿಕೆಯ ಪ್ರಕಾರ, ದೇಶದಾದ್ಯಂತ 13 ನಗರಗಳು 5G ಸೇವೆ ಪಡೆಯಲಿವೆ. ಅವುಗಳೆಂದರೆ ಅಹಮದಾಬಾದ್, ಬೆಂಗಳೂರು, ಚಂಡೀಗಢ, ಚೆನ್ನೈ, ದೆಹಲಿ, ಗಾಂಧಿನಗರ, ಗುರುಗ್ರಾಮ್, ಹೈದರಾಬಾದ್, ಜಾಮ್ನಗರ, ಕೋಲ್ಕತ್ತಾ, ಲಕ್ನೋ, ಮುಂಬೈ ಮತ್ತು ಪುಣೆ ನಗರ.

ಆದರೆ, ಯಾವ ಟೆಲಿಕಾಂ ಆಪರೇಟರ್ ಮೊದಲಿಗೆ 5G ಸೇವೆಗಳನ್ನು ಹೊರತರುತ್ತದೆ ಎಂಬುದನ್ನು ಸರ್ಕಾರ ದೃಢಪಡಿಸಿಲ್ಲ. ಎಲ್ಲಾ ಮೂರು ಪ್ರಮುಖ ಟೆಲಿಕಾಂ ಆಪರೇಟರ್ ಗಳಾದ Jio, Airtel ಮತ್ತು Vi (Vodafone Idea) ಈಗಾಗಲೇ ಈ ನಗರಗಳಲ್ಲಿ ಪ್ರಾಯೋಗಿಕ ಸೈಟ್ ಗಳನ್ನು ಸ್ಥಾಪಿಸಿವೆ.

2018 ರಲ್ಲಿ ಪ್ರಾರಂಭವಾದ ಸ್ಥಳೀಯ 5G ಟೆಸ್ಟ್ ಬೆಡ್ ಯೋಜನೆಗಾಗಿ DoT Eight ಏಜೆನ್ಸಿಗಳೊಂದಿಗೆ ಪಾಲುದಾರಿಕೆ ಹೊಂದಿದೆ. 224 ಕೋಟಿ ವೆಚ್ಚದ ಈ ಯೋಜನೆಯು ಡಿಸೆಂಬರ್ 31, 2021 ರೊಳಗೆ ಪೂರ್ಣಗೊಳ್ಳುವ ಸಾಧ್ಯತೆಯಿದೆ.

Edited By : Nirmala Aralikatti
PublicNext

PublicNext

28/12/2021 12:40 pm

Cinque Terre

38.16 K

Cinque Terre

1

ಸಂಬಂಧಿತ ಸುದ್ದಿ