ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಜಿಯೋ ನೆಟ್ವರ್ಕ್ ಡೌನ್

ಬೆಂಗಳೂರು: ಸೋಮವಾರವಷ್ಟೇ ಫೇಸ್ ಬುಕ್ ಮತ್ತು ಅದರ ಸಾಮಾಜಿಕ ವೇದಿಕೆಗಳಾದ ವಾಟ್ಸ್ ಆ್ಯಪ್ ಮತ್ತು ಇನ್ ಸ್ಟಾಗ್ರಾಮ್ ಸೇವೆಯಲ್ಲಿ ವ್ಯತ್ಯಯ ಉಂಟಾಗಿ ಭಾರೀ ಸುದ್ದಿಯಾಗಿತ್ತು. ಆ ಸಮಸ್ಯೆ ಬಗೆ ಹರಿಯುವಷ್ಟರಲ್ಲಿ ಜಿಯೊ ನೆಟ್ ವರ್ಕ್ ಡೌನ್ ಆಗಿದೆ. ಕೆಲವು ಜನರು ತಮ್ಮ ಫೋನ್ ಗಳಲ್ಲಿ ಅಪ್ಲಿಕೇಶನ್ ಗಳನ್ನು ಬಳಸಲು ಸಾಧ್ಯವಾಗುತ್ತಿಲ್ಲ ಎಂದು ದೂರಿದರೆ, ಇತರರು ಕಂಪನಿಯನ್ನು ಮತ್ತು ಅದರ ಚಂದಾದಾರರನ್ನು ಅಣಕಿಸುವ ತಮಾಷೆಯ ಮೀಮ್ ಗಳನ್ನು ಹರಿಬಿಟ್ಟಿದ್ಧಾರೆ.

ಮೆಕ್ ಡೊನಾಲ್ಡ್ಸ್, ಟ್ವಿಟರ್ ಮತ್ತು ರಿಲಯನ್ಸ್ ಜಿಯೋದಂತಹ ಹಲವಾರು ಬ್ರಾಂಡ್ ಗಳು ತಮ್ಮ ಸ್ಪರ್ಧಿ ಮಾರ್ಕ್ ಜುಕರ್ಬರ್ಗ್ ಒಡೆತನದ ಫೇಸ್ ಬುಕ್ ವಿರುದ್ಧ ಟೀಕೆಗೈದಿದ್ದವು. ಇದೀಗ, ಅದೇ ಪರಿಸ್ಥಿತಿಯಲ್ಲಿ ಜಿಯೊ ಸಿಲುಕಿದೆ. ಟ್ವಿಟರ್ ನಲ್ಲಿ ಸಾವಿರಾರು ಜಿಯೊ ಬಳಕೆದಾರರು ಭಾರತದಲ್ಲಿ ದೂರವಾಣಿ ಕರೆ ಮಾಡಲು ಸಾಧ್ಯವಾಗುತ್ತಿಲ್ಲ ಎಂದಿದ್ದಾರೆ.

ಬೆಂಗಳೂರು, ದೆಹಲಿ, ಮುಂಬೈ, ಇಂದೋರ್ ಸೇರಿದಂತೆ ಭಾರತದ ಹಲವು ನಗರಗಳು ಜಿಯೊ ಸೇವೆ ವ್ಯತ್ಯಯವಾಗಿರುವುದನ್ನು ಡೌನ್ ಡಿಟೆಕ್ಟರ್ ವೆಬ್ ಸೈಟ್ ನಲ್ಲಿ ತೋರಿಸಲಾಗಿದೆ.

Edited By : Nirmala Aralikatti
PublicNext

PublicNext

06/10/2021 05:09 pm

Cinque Terre

33.48 K

Cinque Terre

0

ಸಂಬಂಧಿತ ಸುದ್ದಿ