ಶ್ರೀಹರಿಕೋಟ: ಆಂಧ್ರಪ್ರದೇಶದ ಶ್ರೀಹರಿಕೋಟದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಇಂದು ಅತ್ಯಾಧುನಿಕ ಜಿಯೋ - ಇಮೇಜಿಂಗ್ ಉಪಗ್ರಹ ಇಒಎಸ್ -03 ಉಪಗ್ರಹವನ್ನು ಉಡಾವಣೆ ಮಾಡಲಾಗಿದೆ. ಭೂ ಪರಿವೀಕ್ಷಣೆ ಉಪಗ್ರಹ ಇಒಎಸ್-03 ಅನ್ನು ಗುರವಾರ ಯಶಸ್ವಿಯಾಗಿ ಉಡಾವಣೆ ಮಾಡಲಾಗಿದೆ ಎಂದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೊ) ತಿಳಿಸಿದೆ.
51.70 ಮೀಟರ್ ಉದ್ದದ ಜಿಎಸ್ ಎಲ್ ವಿ-ಎಫ್10 ರಾಕೆಟ್ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಬೆಳಗ್ಗೆ 05.43ಕ್ಕೆ ಸರಿಯಾಗಿ ಉಡಾವಣೆಗೊಂಡಿತು. ಮೇಘಸ್ಫೋಟ ಸೇರಿದಂತೆ, ಕೃಷಿ, ಅರಣ್ಯ, ಜಲಮೂಲಗಳು, ನೈಸರ್ಗಿಕ ವಿಕೋಪಗಳ ಮೇಲ್ವಿಚಾರಣೆಗೆ ನೆರವಾಗುವಂತೆ ದೇಶದ ನೈಜ ಸಮಯದ ಚಿತ್ರಗಳನ್ನು ಸಂಗ್ರಹಿಸುವುದು ಈ ಯೋಜನೆಯ ಉದ್ದೇಶವಾಗಿದೆ.
ಈ ಯೋಜನೆ 10 ವರ್ಷಗಳವರೆಗೆ ಮುಂದುವರಿಯಲಿದೆ ಎಂದು ಇಸ್ರೋ ಹೇಳಿದೆ.
PublicNext
12/08/2021 07:37 am