ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕೊರೊನಾ ವಾರ್ಡ್ ಕೆಲಸಕ್ಕಾಗಿ IISC ರೋಬೋ..!

ಬೆಂಗಳೂರು : ಕೊರೊನಾ ವಾರ್ಡ್ ಸೇರಿದಂತೆ ಮನುಷ್ಯರು ಹೋಗಲು ಸುರಕ್ಷಿತವಲ್ಲದ ಸ್ಥಳಗಳಿಗೆ ತೆರಳಿ ಸರಳವಾಗಿ ಕೆಲಸ ಮಾಡಬಲ್ಲ ರಿಮೋಟ್ ನಿಯಂತ್ರಿತ ‘ರೋಬೋಟ್ ಮಾನವ’ನನ್ನು ಐಐಎಸ್ ಸಿ ವಿದ್ಯಾರ್ಥಿಗಳು ಆವಿಷ್ಕರಿಸಿದ್ದಾರೆ.

‘ಆಶಾ’ ಹೆಸರಿನ ಈ ರೋಬೋಟ್ ರಿಮೋಟ್ ಮಾರ್ಗದರ್ಶದ ಮೂಲಕ ಕೆಲಸ ಮಾಡುತ್ತದೆ. ಅಷ್ಟೇ ಅಲ್ಲ ಪ್ರಾಥಮಿಕ ಸಂಭಾಷಣೆಯನ್ನೂ ಮಾಡಬಲ್ಲ ರೊಬೋಟ್ ಅದಕ್ಕೆ ಅನುಗುಣವಾಗಿ ಮುಖದ ಹಾವಭಾವಗಳನ್ನು ಬದಲಿಸಬಲ್ಲದು.

ಆರ್ಟ್ ಪಾರ್ಕ್ ಕಂಪನಿ ತಾಂತ್ರಿಕ ಸಹಯೋಗದಲ್ಲಿ ಐಐಎಸ್ ಸಿ ಯ ಐದು ಮಂದಿ ವಿದ್ಯಾರ್ಥಿಗಳು ರೋಬೋಟ್ ಅಭಿವೃದ್ಧಿಪಡಿಸಿದ್ದಾರೆ.

ಈ ಬಗ್ಗೆ ತಾಂತ್ರಿಕ ಸಹಾಯಕ ವಿ.ಪಿ.ವರುಣ್, ಕೊರೊನಾ ವಾರ್ಡ್ ನಲ್ಲಿನ ರೋಗಿಗಳಿಗೆ ಶುಶ್ರೂಷೆ ಮಾಡಲು ಸಹಾಯಕಿಯಾಗಿ, ವೃದ್ಧಾಶ್ರಮ, ಸಬ್ ಮೆರಿನ್ ಹಾಗೂ ಸ್ಪೇಸ್ ಮಿಷನ್ಸ್ ಗಳಲ್ಲಿ ಆರೋಗ್ಯ ಸಹಾಯಕಿಯಾಗಿ ಕೆಲಸ ಮಾಡಲು ಹಾಗೂ ರಿಮೋಟ್ ಆಧಾರಿತ ಸ್ವಾಗತಕಾರಣಿಯಾಗಿ ಕೆಲಸ ಮಾಡಲ್ಲದು. ಮನುಷ್ಯರ ಮುಖ ಭಾವಗಳನ್ನು ಅನುಕರಿಸಿ ಪ್ರಾಥಮಿಕ ಸಂಭಾಷಣೆ ನಡೆಸಬಲ್ಲದು. ಸಬಲ್ಲದು.

ಡ್ರೋನ್ ಗಳ ಬ್ಯಾಟರಿ ಕಡಿಮೆ ಅವಧಿಗೆ ಖಾಲಿಯಾಗುವ ಹಿನ್ನೆಲೆಯಲ್ಲಿ ಡ್ರೋನ್ ತನ್ನ ಬ್ಯಾಟರಿಯನ್ನು ಸ್ವಯಂಚಾಲಿತವಾಗಿ ಚಾರ್ಜ್ ಮಾಡಿಕೊಳ್ಳಲು ಅನುವಾಗುವ ವಿಶಿಷ್ಟ ಚಾರ್ಜಿಂಗ್ ಪೋರ್ಟನ್ನೂ ಸಹ ಆವಿಷ್ಕರಿಸಿದ್ದಾರೆ. ಡ್ರೋನ್ ನ ಲ್ಯಾಂಡಿಂಗ್ ಲೆಗ್ಸ್ ಗಳನ್ನು (ಕಾಲು) ಮಾತ್ರ ಬದಲಿಸಿ ಈ ಪೋರ್ಟ್ ನಿಂದ ಚಾರ್ಜ್ ಮಾಡಬಹುದು. ಪೋರ್ಟ್ ಮೇಲೆ ಡ್ರೋನ್ ಕೂತ ತಕ್ಷಣ ಕಾಲುಗಳ ಮೂಲಕ ಡ್ರೋನ್ ನ ಬ್ಯಾಟರಿ ಚಾರ್ಜ್ ಆಗುತ್ತದೆ.

Edited By : Nirmala Aralikatti
PublicNext

PublicNext

05/02/2021 09:24 am

Cinque Terre

76.17 K

Cinque Terre

4

ಸಂಬಂಧಿತ ಸುದ್ದಿ