ಹರಿಯಾಣ: ದೇಶದ ಮೊದಲ ಏರ್ ಟ್ಯಾಕ್ಸಿ ಸೇವೆಗೆ ಹರಿಯಾಣ ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್ ಅವರು ಚಾಲನೆ ನೀಡಿದ್ದಾರೆ.
ಚಂಡೀಗಢ– ಹಿಸಾರ್ ನಡುವಿನ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಈ ಸೇವೆಗೆ ಚಾಲನೆ ನೀಡಲಾಯಿತು. ಏರ್ ಟ್ಯಾಕ್ಸಿ ನಾಲ್ಕು ಸೀಟುಗಳ ವಿಮಾನವಾಗಿದ್ದು, ಪೈಲಟ್ ಹೊರತುಪಡಿಸಿ ಇತರ ಮೂರು ಪ್ರಯಾಣಿಕರು ಇದರಲ್ಲಿ ಪ್ರಯಾಣಿಸಬಹುದು.
ಈ ವಿಶಿಷ್ಟ ಏರ್ ಟ್ಯಾಕ್ಸಿ ಮೂಲಕ ಚಂಡೀಗಢದಿಂದ ಹಿಸಾರ್‌ಗೆ ಇರುವ ದೂರವನ್ನು ಕೇವಲ 45 ನಿಮಿಷಗಳಲ್ಲಿ ಕ್ರಮಿಸಬಹುದಾಗಿದೆ. ಇದಕ್ಕಾಗಿ ಏರ್ ಟ್ಯಾಕ್ಸಿ ಏವಿಯೇಷನ್ ಕಂಪನಿಯು 1,755 ರೂ. ಶುಲ್ಕವನ್ನು ನಿಗದಿಪಡಿಸಿದೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಮನೋಹರ್ ಲಾಲ್ ಖಟ್ಟರ್, ಕೇಂದ್ರ ಸರ್ಕಾರದ ‘ಉದಯ್’ ಯೋಜನೆಯಡಿ ಈ ಸೇವೆಯನ್ನು ಆರಂಭಿಸಲಾಗಿದೆ. ವಿಮಾನ ಹಾರಾಟವನ್ನು ಕೈಗೆಟುಕುವಂತೆ ಮಾಡಲು ಈ ಯೋಜನೆಯನ್ನು ಪರಿಚಯಿಸಲಾಗಿದೆ ಎಂದು ತಿಳಿಸಿದ್ದಾರೆ.
PublicNext
17/01/2021 09:13 pm