ನವದೆಹಲಿ: ಹೆಮ್ಮಾರಿ ಕೊರೊನಾ ಜನ ಜೀವನ, ಆರ್ಥಿಕತೆ, ಉದ್ಯೋಗದ ಮೇಲೆ ತನ್ನ ಕರಾಳ ಛಾಯೆ ಬೀರಿದೆ. ಕಳೆದ ಎಂಟು ತಿಂಗಳಲ್ಲಿ ವಿವಿಧ ಕ್ಷೇತ್ರಗಳಲ್ಲಿ ಅನೇಕರು ಉದ್ಯೋಗ ಕಳೆದುಕೊಂಡಿದ್ದಾರೆ. ಇನ್ನೂ ಅನೇಕ ವ್ಯಾಪಾರಿಗಳು, ಉದ್ಯಮಿಗಳು ಭಾರೀ ನಷ್ಟ ಅನುಭವಿಸಿದ್ದಾರೆ.
ಎಂಎಸ್ಎಂಇ ಹಾಗೂ ಸ್ಟಾರ್ಟಪ್ಸ್ ಇದಕ್ಕೆ ಹೊರತಾಗಿಲ್ಲ. ಕಳೆದ ಎಂಟು ತಿಂಗಳಿನಲ್ಲಿ ಶೇ. 78ರಷ್ಟು ಎಂಎಸ್ಎಂಇ ಹಾಗೂ ಸ್ಟಾರ್ಟಪ್ಸ್ ತನ್ನ ಕೆಲಸಗಾರರ ಸಂಖ್ಯೆಯನ್ನು ಕಡಿತಗೊಳಿಸಿವೆ ಎಂದು ಲೋಕಲ್ಸರ್ಕಲ್ಸ್ ಎಂಬ ಸಂಸ್ಥೆ ತನ್ನ ಸಮೀಕ್ಷೆಯಲ್ಲಿ ತಿಳಿಸಿದೆ.
ಸಮೀಕ್ಷೆ ಪ್ರಕಾರ, ಕೊರೊನಾ ಲಾಕ್‌ಡೌನ್ ಬಳಿಕ ಶೇ.25 ಮಂದಿ ತಮ್ಮ ಸಂಸ್ಥೆಗಳನ್ನೇ ಮುಚ್ಚಿದ್ದು, ಶೇ. 15 ಮಂದಿ ಕೆಲಸಗಾರರ ಸಂಖ್ಯೆಯನ್ನು ಶೇ. 50ಕ್ಕೆ ಇಳಿಸಿದ್ದಾಗಿ ಹೇಳಿದ್ದಾರೆ. ಬೆರಳೆಣಿಕೆ ಕಂಪನಿಗಳಲ್ಲಿ ಮಾತ್ರ ಶೇ. 6 ಮಂದಿ ಕೆಲಸಗಾರರ ಸಂಖ್ಯೆ ಹೆಚ್ಚಿಸಿಕೊಂಡಿದ್ದರೆ, ಶೇ. 16 ಮಂದಿ ಕೋವಿಡ್ ಮುಂಚೆ ಇದ್ದಷ್ಟೇ ಕೆಲಸಗಾರರನ್ನು ಉಳಿಸಿಕೊಂಡಿದ್ದಾರೆ ಎಂಬ ಮಾಹಿತಿ ಲಭಿಸಿದೆ.
ಸೆಂಟರ್ ಫಾರ್ ಮಾನಿಟರಿಂಗ್ ಇಂಡಿಯನ್ ಎಕಾನಮಿ (ಅಒIಇ) ಪ್ರಕಾರ, ಮಾರ್ಚ್ನಿಂದ ಆಗಸ್ಟ್ವರೆಗೆ 60 ಲಕ್ಷ ಭಾರತೀಯರು ವೈಟ್ ಕಾಲರ್ ಜಾಬ್ಗಳನ್ನು ಕಳೆದುಕೊಂಡಿದ್ದಾರೆ.
PublicNext
20/10/2020 08:07 pm