ಅಮರಾವತಿ: ತಿರುಪತಿಯಲ್ಲಿ ಭಕ್ತಸಾಗರ ಹೆಚ್ಚಾಗಿದೆ. ತಿರುಪತಿಯಲ್ಲಿ 6 ಕಿ.ಮೀ.ವರೆಗೂ ಭಕ್ತರು ಸಾಲುಗಟ್ಟಿ ನಿಂತಿದ್ದು, ತಿಮ್ಮಪ್ಪನ ದರ್ಶನ ಪಡೆಯಲು ಬರೋಬ್ಬರಿ 50 ಗಂಟೆಗಳ ಕಾಲ ಕಾಯುವ ಪರಿಸ್ಥಿತಿ ನಿರ್ಮಾಣವಾಗಿದೆ.
ಎಲ್ಲಿ ನೋಡಿದರೂ ಜನವೋ ಜನ. ದೇಗುಲದ ಕಾಂಪ್ಲೆಕ್ಸ್‌ನಿಂದ ಆಚೆ ದೇವಾಲಯದ ಮುಂಭಾಗ, ಲಡ್ಡುಗೂ ಕ್ಯೂ, ಮುಡಿ ಸೇವೆಗೂ ಕ್ಯೂ, ಲಗೇಜ್ ಕೌಂಟರ್‌ನಲ್ಲೂ ಕ್ಯೂ, ಎಲ್ಲಿ ನೋಡಿದ್ರು ಲಕ್ಷಾಂತರ ಭಕ್ತರು. ಇದು ಆಂಧ್ರಪ್ರದೇಶದ ತಿರುಪತಿ ತಿರುಮಲದ ಸ್ಥಿತಿಯಾಗಿದೆ. ಸಾಲು ಸಾಲು ರಜಾ ಇರುವ ಹಿನ್ನೆಲೆಯಲ್ಲಿ ಕಳೆದ 2 ದಿನದಿಂದ ತಿರುಪತಿ ತಿಮ್ಮಪ್ಪ ಬಾಗಿಲಿನಲ್ಲಿ ಭಕ್ತ ಸಾಗರ ಹರಿದು ಬಂದಿದೆ. ಈ ಭಕ್ತರನ್ನು ನಿಯಂತ್ರಿಸಲು ಟಿಟಿಡಿ ಮಂಡಳಿ ಹರಸಾಹಸ ಪಡುತ್ತಿದ್ದಾರೆ.
PublicNext
09/10/2022 03:58 pm