ಗದಗ: ಒಂದು ಸುಂದರ ಜಾಗ. ಇಲ್ಲಿ ಒಂದು ದೇವಸ್ಥಾನ ಇದೆ. ಇದರ ನಿರ್ಮಾಣದ ಶೈಲಿ ನಿಜಕ್ಕೂ ಆಕರ್ಷಕವಾಗಿದೆ. ಇದನ್ನ ಕಂಡೋರು ವ್ಹಾವ್ ಅಂತ ಹೇಳುತ್ತಾರೆ. ಬನ್ನಿ, ನೋಡೋಣ
ದೇವಸ್ಥಾನದ ಪ್ರವೇಶದಲ್ಲಿಯೇ ಪುಷ್ಕರ್ಣಿ ಇದೆ. ಹಾಗೆ ಮುಂದೆ ಸಾಗಿದರೆ, ಕಲ್ಲಿನ ಮಂಟಪ. ಈ ಮಂಟಪ ದಾಟಿ ಮುಂದೆ ಸಾಗಿದರೆ, ನಕ್ಷತ್ರ ಆಕಾರದ ಬುನಾದಿ ಮೇಲೆ ಕಟ್ಟಿದ ಸುಂದರ ದೇವಸ್ಥಾನ.
ಇದನ್ನ ಮುಳಗುಂದ ಊರಿನ ಜನ ಶ್ರೀ ಶಿದ್ದೇಶ್ವರ ದೇವಸ್ಥಾನ ಅಂತಲೇ ಕರೆಯುತ್ತಾರೆ. ಈ ದೇವಸ್ಥಾನ ಜಕಣಾಚಾರಿ ಕಟ್ಟಿದ ದೇವಸ್ಥಾನವೇ ಆಗಿದೆ. ಇದಕ್ಕೆ ಸಾಕ್ಷಿ ಎಂಬಂತೆ ಇಡೀ ದೇವಸ್ಥಾನ ನಿಮ್ಮ ಕಣ್ಮುಂದೆ ಕಂಗೊಳಿಸಿ ಇತಿಹಾಸ ಕಥೆ ಹೇಳುತ್ತದೆ.
ಪ್ರತಿ ವರ್ಷ ಈ ದೇವಸ್ಥಾನದಲ್ಲಿ ಒಂದು ವಿಸ್ಮಯ ಜರಗುತ್ತದೆ. ಸೂರ್ಯನ ಕಿರಣ ನೇರವಾಗಿ ಈಶ್ವರ ಲಿಂಗುವಿನ ಮೇಲೆ ಬೀಳುತ್ತದೆ. ಆದರೆ, ಇದು ವಿಸ್ಮಯ ಅಲ್ಲವೇ ಅಲ್ಲ. ಜಕಣಾಚಾರಿ ಕಟ್ಟಡದ ಶೈಲಿಯಿಂದಲೇ ಇದು ಸಾಧ್ಯವಾಗುತ್ತದೆ. ಇಂತಹ ಈ ದೇವಸ್ಥಾನ ಅಭಿವೃದ್ದಿ ಆಗಿದೆ. ಆದರೆ, ಮೆಂಟೇನ್ ಮಾಡೋರೇ ಇಲ್ಲ ಅನ್ನುವುದೇ ದುರಂತ.
PublicNext
25/05/2022 06:08 pm